ಅರೆಕಾಲಿಕ ಉಪನ್ಯಾಸಕರಿಗೆ ಬಿಗ್ ಶಾಕ್..! – 4 ತಿಂಗಳಿನಿಂದ ವೇತನ ಇಲ್ಲ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 19. ರಾಜ್ಯದ ಸರ್ಕಾರಿ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರಿಗೆ ಕಳೆದ 4 ತಿಂಗಳಿಂದ ವೇತನವಿಲ್ಲದೆ ಕಂಗೆಟ್ಟಿದ್ದು, ಮಾರ್ಚ್ ತಿಂಗಳಿನಿಂದ 1,250 ಅರೆಕಾಲಿಕ ಉಪನ್ಯಾಸಕರಿಗೆ ವೇತನ ನೀಡಿಲ್ಲ ಎಂದು ಅರೆಕಾಲಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರಶಾಂತ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಅರೆಕಾಲಿಕ ಉಪನ್ಯಾಸಕರಿಗೆ ತಿಂಗಳಿಗೆ 12,500 ರೂ. ವೇತನ ಕೊಡಲಾಗುತ್ತಿದ್ದು, ಕಳೆದ ಮಾರ್ಚ್ ನಿಂದ ವೇತನ ಪಾವತಿಯಾಗಿಲ್ಲ. ಅರೆಕಾಲಿಕ ಉಪನ್ಯಾಸಕರು ವಾರಕ್ಕೆ 10ರಿಂದ 12 ಗಂಟೆ ಪಾಠದಂತೆ ತಿಂಗಳಿಗೆ ಕನಿಷ್ಠ 36 ಗಂಟೆ ಪಾಠ ಮಾಡುತ್ತಾರೆ. ಆದರೆ ಅರೆ ಕಾಲಿಕ ಉಪನ್ಯಾಸಕರಿಗೆ ಒಂದು ಬಾರಿ ಮಾತ್ರ ಮುಂಬಡ್ತಿ ನೀಡಲಾಗಿದೆ ಎಂದು ಹೇಳಿದ್ದಾರೆ.

Also Read  ಉಡುಪಿ : ಮುದ್ದು ಮಗಳಿಗೆ "ಕನ್ನಡ" ವೆಂದು ನಾಮಕರಣ

error: Content is protected !!
Scroll to Top