ಹೆಸರು ಲಕ್ಷ್ಮೀ.. ಲಿಂಗ ಗಂಡು.. ಬಸ್ ನಲ್ಲಿ ಫ್ರೀ ಪ್ರಯಾಣ ➤ ಗಲಿಬಿಲಿಗೊಂಡ ಕಂಡಕ್ಟರ್

(ನ್ಯೂಸ್ ಕಡಬ) newskadaba.com ಯಾದಗಿರಿ, ಜು. 12. ಈಗಾಗಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಯಾಗಿದ್ದು, ಈ ಹಿನ್ನೆಲೆ ಮಹಿಳಾ ಪ್ರಯಾಣಿಕರ ಆಧಾರ್ ಕಾರ್ಡ್​ ನ್ನು ಕಂಡಕ್ಟರ್ ಪರಿಶೀಲನೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಯಾದಗಿರಿಯಲ್ಲಿ ಕಂಡಕ್ಟರ್ ಕಕ್ಕಾಬಿಕ್ಕಿಯಾದ ಘಟನೆ ವರದಿಯಾಗಿದೆ.

ಯಾದಗಿರಿಯ ಶಹಾಪುರ ತಾಲೂಕಿನ ತಡಬಿಡಿ ಗ್ರಾಮದಲ್ಲಿ ತೃತೀಯ ಲಿಂಗಿಯೋರ್ವರು ಪುರುಷರ ಬಟ್ಟೆ ಧರಿಸಿ ಪ್ರಯಾಣ ಮಾಡುತ್ತಿದ್ದರು‌. ಈ ವೇಳೆ ಕಂಡಕ್ಟರ್ ಟಿಕೆಟ್ ಕೇಳಿದಾಗ ಪ್ರಯಾಣಿಕ ಆಧಾರ್ ಕಾರ್ಡ್​ ತೋರಿಸಿದ್ದು,ಅದರಲ್ಲಿ ಹೆಸರು ಲಕ್ಷ್ಮೀ ಎಂದೂ ಲಿಂಗ ಪುರುಷ ಎಂದು ನಮೂದಿಸಲಾಗಿತ್ತು. ಈ ವೇಳೆ ಪ್ರಶ್ನಿಸಿದ ಕಂಡಕ್ಟರ್ ಗೆ ಆಕೆ ತೃತೀಯ ಲಿಂಗಿ ಎಂದು ತಿಳಿಸಿದ್ದಾಳೆ. ನಂತರ ಆಕೆಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಲಾಯಿತು ಎನ್ನಲಾಗಿದೆ.

Also Read  ಬೆಂಗಳೂರು : ಸಾರಿಗೆ ನೌಕರರು 6 ತಿಂಗಳು ಮುಷ್ಕರ ನಡೆಸದಂತೆ ನಿರ್ಬಂಧ ವಿಧಿಸಿದ ರಾಜ್ಯ ಸರಕಾರ

error: Content is protected !!
Scroll to Top