‘ಸೋಲು-ಗೆಲುವು ಹೊಸದೇನಲ್ಲ’ ಎಂದ ಮಾಜಿ ಸಿಎಂ.!➤ ಎಚ್​​ಡಿ ಕುಮಾರಸ್ವಾಮಿ

(ನ್ಯೂಸ್ ಕಡಬ) newskadaba.com ಬೆಂಗಳೂರು,

ಮೇ .13  ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರಕಾರಕ್ಕೆ ಶುಭವಾಗಲಿ. ಜನರ ಆಶೋತ್ತರಳಿಗೆ ಸ್ಪಂದಿಸಲಿ ಎಂದು ಹಾರೈಸುತ್ತೇನೆ. ಈ ಚುನಾವಣೆಯಲ್ಲಿ ಪಕ್ಷದ ಪರವಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರು, ಮುಖಂಡರು, ಅಭ್ಯರ್ಥಿಗಳಿಗೆ ನನ್ನ ಕೃತಜ್ಞತೆಗಳು.

ಯಾವುದೇ ಕಾರಣಕ್ಕೂ ಯಾರೂ ಧೃತಿಗೆಡುವುದು ಬೇಡ, ನಿಮ್ಮ ಜತೆಯಲ್ಲಿ ನಾನಿದ್ದೇನೆ ಎಂದು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಸೋಲು-ಗೆಲುವು  ಹೊಸದೇನಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಎಚ್​​ಡಿಕೆ ಹೇಳಿದ್ದಾರೆ.

ಕಾಂಗ್ರೆಸ್​ ಸ್ಪಷ್ಟ ಬಹುಮತದತ್ತ ಮುನ್ನಡೆ ಸಾಧಿಸಿದೆ. ಇದರ ನಡುವೆ ಟ್ವೀಟ್ ಮಾಡಿರುವ ಎಚ್​ಡಿ ಕುಮಾರಸ್ವಾಮಿ ಅವರು, ನನಗಾಗಲಿ, ನಮ್ಮ ಕುಟುಂಬಕ್ಕೆ ಆಗಲಿ ಸೋಲು, ಗೆಲುವು ಹೊಸದೇನಲ್ಲ. ಈ ಹಿಂದೆ ಎಚ್.ಡಿ.ದೇವೇಗೌಡರು, ಎಚ್.ಡಿ.ರೇವಣ್ಣ, ನಾನೂ ಸೋತಿದ್ದೆವು. ಹಾಗೆಯೇ ಗೆದ್ದಾಗ ಬದ್ಧತೆಯಿಂದ ಜನಸೇವೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Also Read  ಜಮ್ಮು- ಕಾಶ್ಮೀರದಲ್ಲಿ ಮತ್ತೆ ಐವರು ಉಗ್ರರ ಹತ್ಯೆ

 

 

 

 

error: Content is protected !!
Scroll to Top