ಅಥಣಿಯಲ್ಲಿ ಲಕ್ಷ್ಮಣ್‌ ಸವದಿಗೆ ಭರ್ಜರಿ ಜಯ..!

(ನ್ಯೂಸ್ ಕಡಬ) Newskadaba.com ಬೆಳಗಾವಿ,ಮೇ.13 ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ಟಿಕೆಟ್‌ ಸಿಗದೇ ಕಾಂಗ್ರೆಸ್‌ ಸೇರಿದ್ದ ಲಕ್ಷ್ಮಣ್‌ ಸವದಿ ಅಥಣಿಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ರೋಚಕ ಹಣಾಹಣಿಯಿಂದ ಕರ್ನಾಟಕದ ಗಮನ ಸೆಳೆದಿದ್ದ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ವಿಜಯಲಕ್ಷ್ಮೀಯನ್ನು ಲಕ್ಷ್ಮಣ್‌ ಸವದಿ ತಮ್ಮದಾಗಿಸಿಕೊಂಡಿದ್ದಾರೆ.

ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್‌ ಕುಮಟಳ್ಳಿಯಾಗಿದ್ದರೂ ಲಕ್ಷ್ಮಣ್‌ ಸವದಿ ಹಾಗೂ ರಮೇಶ್‌ ಜಾರಕಿಹೊಳಿ ನಡುವಿನ ಕದನ ರಾಜ್ಯದ ಜನರನ್ನು ಆಕರ್ಷಿಸಿತ್ತು.ಬಿಜೆಪಿ ಅಭ್ಯರ್ಥಿ ಮಹೇಶ್‌ ಕುಮಟಳ್ಳಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ರಮೇಶ್‌ ಜಾರಕಿಹೊಳಿಗೆ ಲಕ್ಷ್ಮಣ್‌ ಸವದಿ ಬಿಗ್‌ ಶಾಕ್‌ ನೀಡಿದ್ದಾರೆ.

Also Read  ಸುಬ್ರಹ್ಮಣ್ಯ: ಪಶು ಆಸ್ಪತ್ರೆ ಕಟ್ಟಡಕ್ಕೆ ಸಚಿವ ಎಸ್.ಅಂಗಾರ ಅವರಿಂದ ಶಂಕುಸ್ಥಾಪನೆ

error: Content is protected !!
Scroll to Top