ಶಿವಮೂರ್ತಿ ಶಾಸ್ತ್ರಿಗಳು ನುಡಿದ ಭವಿಷ್ಯ➤ಕಮಲ ಪಾಳಯದಲ್ಲಿ ಆತಂಕ..!

(ನ್ಯೂಸ್ ಕಡಬ) Newskadaba.com ಬೆಂಗಳೂರು,ಮೇ.13 ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮುಗಿದು ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿರುವಾಗಲೇ ಗೆಲುವಿನ ಲೆಕ್ಕಾಚಾರಗಳು ಸಹ ಗರಿಗೆದರಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚಸಲಿದ್ದು, ಬಿಜೆಪಿ ಕೇವಲ 85 ಸೀಟ್‌ಗಳನ್ನು ಮಾತ್ರ ತೆಗೆದುಕೊಳ್ಳಲಿದೆ ಎಂದು ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದ ಭುಜಂಗ ಮಠದ ಶಿವಮೂರ್ತಿ ಶಾಸ್ತ್ರಿಗಳು ಭವಿಷ್ಯ ನುಡಿದಿದ್ದಾರೆ.

ಈಗಾಗಲೇ ಎಲ್ಲ ಸಮೀಕ್ಷೆಗಳು ಕಾಂಗ್ರೆಸ್ ಕರುನಾಡಿನಲ್ಲಿ ತನ್ನ ಅಧಿಪತ್ಯವನ್ನು ಸಾಧಿಸುತ್ತೇವೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಭುಜಂಗ ಮಠದ ಶಿವಮೂರ್ತಿ ಶಾಸ್ತ್ರಿಗಳು ನುಡಿದ ಭವಿಷ್ಯ ಕಮಲ ಪಾಳಯದಲ್ಲಿ ಆತಂಕ ಮೂಡಿದೆ. ರಾಜ್ಯದಲ್ಲಿ ಕೇಸರಿ ರಹಿತ ಸರಕಾರ ರಚನೆಯಾಗಲಿದೆ ಎಂಬ ಹೇಳಿಕೆ ನೀಡಿದ್ದು, ಈ ಬಾರಿ ಭಾರತೀಯ ಜನತಾ ಪಕ್ಷ ಅಧಿಕಾರ ಹಿಡಿಯುವುದಿಲ್ಲ ಎಂದು ಹೇಳಿದ್ದಾರೆ.

Also Read  OLX ನಲ್ಲಿ ಆರ್ಮಿ ಅಧಿಕಾರಿಗಳ ಹೆಸರಲ್ಲಿ ವಂಚನೆ ➤ ನಾಲ್ವರು ಆರೋಪಿಗಳು ಸಿಸಿಬಿ ವಶಕ್ಕೆ

ಬಿಜೆಪಿಗರು ಮಾಡಿದ ತಪ್ಪಿನ ಪರಿಣಾಮವಾಗಿ ಚುನಾವಣೆಯಲ್ಲಿ 85 ಸ್ಥಾನವನ್ನು ಪಡೆಯಲು ಹರಸಾಹಸ ಪಡಬೇಕಾಗಿದೆ. ಇನ್ನು ಕಾಂಗ್ರೆಸ್ 115 ರಿಂದ 120ರವರೆಗೆ ಸ್ಥಾನಗಳನ್ನು ಪಡೆದು ಸರಕಾರವನ್ನು ಏಕಾಂಗಿಯಾಗಿ ರಚಿಸುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

 

 

 

 

 

 

error: Content is protected !!
Scroll to Top