ರಾಷ್ಟ್ರೀಯ ಯುವದಿನದ ಅಂಗವಾಗಿ ರಕ್ತದಾನ ಶಿಬಿರ ಅಯೋಜನೆ .

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಜ.13.  ರಾಷ್ಟ್ರೀಯ ಯುವ ದಿನದ ಅಂಗವಾಗಿ ಚಿಕ್ಕಬಳ್ಳಾಪುರದ ಜಿಲ್ಲಾ  ರೆಡ್ ಕ್ರಾಸ್ ಸಂಸ್ಥೆಯಿಂದ ಹಳೆ ಆಸ್ಪತ್ರೆ ಅವರಣದಲ್ಲಿ ರಕ್ತದಾನ ಶಿಬಿರ ನಡೆಯಿತು. ಶಿಕ್ಷಕರು, ವಿದ್ಯಾರ್ಥಿಗಳು, ವೈದ್ಯರು, ಹೋಂ ಗಾರ್ಡ್ ಸಿಬ್ಬಂದಿ ಹಾಗೂ ವಕೀಲರು ಸೇರಿದಂತೆ ಎಲ್ಲ ವರ್ಗದವರು ಭಾಗವಹಿಸಿ ರಕ್ತದಾನ ಮಾಡಿದರು ಎಂದು ತಿಳಿದುಬಂದಿದೆ.

ಶಿಬಿರಕ್ಕೆ ಚಾಲನೆ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಮಾತನಾಡಿ,’ಸ್ವಾಮಿ ವಿವೇಕಾನಂದರು ಯುವ ಜನರ ಪಾಲಿಗೆ ಆದರ್ಶವಾಗಿದ್ದಾರೆ ಎಂದರು. ವಿವೇಕಾನಂದರು ಯುವಕರ ಕಣ್ಮಣಿ. ಭಾರತದ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪ್ರಚುರಪಡಿಸಿದ ಜ್ಞಾನಿ. ಯುವಕರು ಸಾಧನೆಯೊಂದಿಗೆ ಸೇವೆಯನ್ನೂ ಮೈಗೊಡಿಸಿಕೊಳ್ಳಬೇಕು. ಪ್ರತಿವರ್ಷ ಶಿಬಿರ ನಡೆಯಲಿ’ ಎಂದು ಅವರು ಹೇಳಿದರು.

Also Read  ಕಾರು & ಲಾರಿ ನಡುವೆ ಭೀಕರ ಅಪಘಾತ ➤ 6 ಮಂದಿ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top