ಅಂತರಾಷ್ಟ್ರೀಯ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ..!!

(ನ್ಯೂಸ್ ಕಡಬ) newskadaba.com ದಾವಣಗೆರೆ, ಜ. 13.  ಮಲೇಶಿಯಾ ಮತ್ತು ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಥ್ರೋ ಬಾಲ್‌ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿಗಳಾದ ಹೆಚ್.ಕೆ. ರೂಪ, ಸುಜಾತ, ಹೆಚ್.ಕೆ. ಲೀಲಾ ಇವರುಗಳು ದೇಶಕ್ಕೆ ಹಾಗೂ ದಾವಣಗೆರೆ ಜಿಲ್ಲೆ ಕೀರ್ತಿ ತಂದಿದ್ದಾರೆ.

160ನೇ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳ ಕ್ರೀಡಾ ಸಾಧನೆ ಗುರುತಿಸಿ ಪಾಮೇನಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳಾದ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಪಿ.ಎಸ್. ತಿರುಲಪ್ಪ, ಬಡ್ತಿ ಮುಖ್ಯಶಿಕ್ಷಕ ಡಿ.ಆರ್. ದೇವೇಂದ್ರಪ್ಪ, ಶಾಲಾ ಶಿಕ್ಷಕರಾದ ಶರೀಫ್ ಸಾಬ್, ತುಳಿಸಿಮಣಿ, ಪ್ರತಿಭಾ, ವಿ.ಎಸ್. ಶ್ವೇತಾ, ಎಸ್. ಉಮೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ.

Also Read  ಮನೆಯಿಂದ ಚಿನ್ನಾಭರಣ ದರೋಡೆ ಪ್ರಕರಣ ➤ ಸೊತ್ತು ಸಹಿತ ಇಬ್ಬರು ಅಂದರ್..!

error: Content is protected !!
Scroll to Top