ಮಧ್ಯಾಹ್ನದ ಉರಿ ಬಿಸಿಲನ್ನು ಲೆಕ್ಕಿಸದೇ ಜನರತ್ತ ಹಸನ್ಮುಖಿಯಾಗಿ ಕೈ ಬೀಸಿದ ಪ್ರಧಾನಿ ಮೋದಿ

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಜ.13. ಧಾರವಾಡ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡಿರುವ 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಬ್ಬಳ್ಳಿ ನಗರದಲ್ಲಿ ನಿರೀಕ್ಷೆಗೂ ಮೀರಿ ಅಭೂತಪೂರ್ವ ಸ್ವಾಗತ ದೊರಕಿತು.

 

ಇಲ್ಲಿಯ ವಿಮಾನ ನಿಲ್ದಾಣದಿಂದ ಸಮಾರಂಭ ನಡೆಯಲಿದ್ದ ರೈಲ್ವೆ ಮೈದಾನ ವರೆಗಿನ ಸುಮಾರು ಎಂಟು ಕಿಮೀ ದೂರ ನಿರಂತರವಾಗಿ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನಸ್ತೋಮವಿತ್ತು. ತಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮೀಪದಿಂದ ನೋಡಲು ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು, ಮಹಿಳೆಯರು ಮತ್ತು ಮಕ್ಕಳು ಕಾದು ನಿಂತಿದ್ದರು. ಮೋದಿ ಅವರು ಕಾರಿನಲ್ಲಿ ಆಗಮಿಸುತ್ತಿದ್ದಂತೆ, ಮೋದಿ ಮೋದಿ ಎಂದು ಹರ್ಷೋದ್ಗಾರಗೈಯ್ಯುತ್ತ ಪುಳುಕಿತರಾದ ಜನೋಸ್ತೋಮವು ಸಾರ್ಥಕತೆಯ ನಿಟ್ಟಿಸಿರು ಬಿಟ್ಟಿತು. ಸುಮಾರು 45 ನಿಮಿಷಗಳ ಕಾಲ ಪ್ರಧಾನಿ ಜನರತ್ತ ಕೈಬೀಸುತ್ತ ರೋಡ್‌ ಶೋ ನಡೆಸಿದರು.

Also Read  ಇಂದು(ಆ. 29) ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ

ತಮಗಾಗಿ ಕಿಕ್ಕಿರಿದು ನಿಂತಿದ್ದ ಜನರತ್ತ ಹಸನ್ಮುಖಿಯಾಗಿ ಕೈ ಬೀಸುತ್ತ ಮಧ್ಯಾಹ್ನದ ಉರಿ ಬಿಸಿಲು ಲೆಕ್ಕಿಸದೇ ಮೋದಿ ಅವರು ನೆರೆದ ಜನರ ಉತ್ಸಾಹಕ್ಕೆ ಮತ್ತಷ್ಟುಉತ್ಸಾಹದ ಬುಗ್ಗೆ ತುಂಬಿದರು. ಕಪ್ಪು ವರ್ಣದ ಟೋಯೋಟಾ ಫಾಚ್ರ್ಯೂನರ್‌ ಕಾರಿನಲ್ಲಿ ಆಗಮಿಸಿದ ಮೋದಿ ಎಂಟು ಕಿ.ಮೀ. ದೂರವೂ ನಿಧಾನವಾಗಿ ಸಾಗುತ್ತಾ ಎರಡೂ ಬದಿಯಲ್ಲಿನ ಜನರತ್ತ ಕೈ ಬೀಸಿದರು. ಅವರ ದರ್ಶನವಾಗುತ್ತಿದಂತೆ ಜನರೂ ಸಹ ಅವರತ್ತ ಘೋಷಣೆಗಳನ್ನು ಕೂಗಿ ಕೈ ಬೀಸುತ್ತಾ, ಪುಷ್ಪಾರ್ಚನೆಗೈಯ್ಯುವ ಮೂಲಕ ಹುಬ್ಬಳ್ಳಿ ನಗರಕ್ಕೆ ವಿಶೇಷ ಸ್ವಾಗತ ಕೋರಿದರು.

error: Content is protected !!
Scroll to Top