ಬೈಕ್ ಹಾಗೂ ಮೊಬೈಲ್ ಕಳವು ಪ್ರಕರಣ ➤ ಮೂವರು ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 12. ಕಳವು ಮಾಡಿದ ಬೈಕ್ ಗಳಲ್ಲಿ ಸಂಚರಿಸುತ್ತಾ ಒಂಟಿಯಾಗಿ ಓಡಾಡುವವರ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದ ಮೂವರು ಖದೀಮರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಂಧಿತರನ್ನು ಯಲಹಂಕ ಶ್ರೀನಿವಾಸಪುರದ ಮುಬಾರಕ್ ಅಲಿಯಾಸ್ ಡೂಮ್(20), ಅಗ್ರಹಾರ ಲೇಔಟ್ ನ ಸುನೀಲ್ ಅಲಿಯಾಸ್ ಚಿತ್ತು(20) ಹಾಗೂ ಯಲಹಂಕದ ಇಸ್ಮಾಯಿಲ್ ಅಲಿಯಾಸ್ ಜಿಶಾನ್ (19) ಎಂದು ಗುರುತಿಸಲಾಗಿದೆ.

error: Content is protected !!
Scroll to Top