ಮಂಗಳೂರು: ಕಾರಿಂಜ ಇನ್ನು ಮುಂದೆ ಪರಿಸರ ಸೂಕ್ಷ್ಮ ಪ್ರದೇಶ ➤ ಸಚಿವ ಸುನಿಲ್ ಕುಮಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 12.  ಬಂಟ್ವಾಳ ತಾಲ್ಲೂಕಿನ ಕಾರಿಂಜ ತಾಣವನ್ನು ಶೀಘ್ರ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಘೋಷಿಸಿದರು ಎಂದು ವರದಿಯಾಗಿದೆ.

ಕಾರಿಂಜೇಶ್ವರ ದೇಗುಲ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿರುವ ಉತ್ತಮ ಪರಿಸರವನ್ನು ರಕ್ಷಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ಅವರು ಭರವಸೆ ನೀಡಿದರು. ಬಂಟ್ವಾಳ ಕ್ಷೇತ್ರದ ಶಾಸಕ ಯು.ರಾಜೇಶ್ ನಾಯಕ್ ಅವರೊಂದಿಗೆ ಕಾರಿಂಜಕ್ಕೆ ಭೇಟಿ ನೀಡಿದ್ದ ಅವರು ಜನರೊಂದಿಗೆ ಬೆರೆತು ಮಾತನಾಡಿದರು. ಈ ವೇಳೇ ಸಾರ್ವಜನಿಕರು ಮತ್ತು ಭಕ್ತರು ದೇಗುಲಕ್ಕೆ ಕಲ್ಲುಗಣಿಗಾರಿಕೆಗಳಿಂದ ಅಪಾಯ ಇರುವ ವಿಚಾರವನ್ನು ಸಚಿವರ ಗಮನಕ್ಕೆ ತಂದರು. ಕಲ್ಲುಗಣಿಗಾರಿಕೆ ಇದೇ ರೀತಿ ಮುಂದುವರಿದರೆ ದೇಗುಲವು ನಾಶವಾಗಬಹುದು, ಸುತ್ತಮುತ್ತಲ ಪರಿಸರಕ್ಕೆ ಧಕ್ಕೆಯಾಗಬಹುದು ಎಂದು ಜನರು ಆತಂಕ ವ್ಯಕ್ತಪಡಿಸಿದರು. ಕಾರಿಂಜ ಪರಿಸರಕ್ಕೆ ಇರುವ ಆತಂಕದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಸರ್ಕಾರವು ಜಿಲ್ಲಾಧಿಕಾರಿಯಿಂದ ವರದಿ ಪಡೆದುಕೊಂಡ ನಂತರ ಅಗತ್ಯ ಕ್ರಮ ಜರುಗಿಸಲಿದ್ದು, ಈ ತಾಣವನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಲು ಮುಖ್ಯಮಂತ್ರಿ ಸಹ ಒಲವು ತೋರಿದ್ದಾರೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ದೇಗುಲ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.

Also Read  ಸಮುದ್ರಕ್ಕೆ ಈಜಲು ಇಳಿದ ಯುವಕರ ತಂಡ ➤ ಅಲೆಗಳ ಹೊಡೆತಕ್ಕೆ ಸಿಲುಕಿ ಓರ್ವ ಮೃತ್ಯು, ಇನ್ನೋರ್ವ ಗಂಭೀರ

error: Content is protected !!
Scroll to Top