ಹೃದಯಾಘಾತದಿಂದ ಯಾದಗಿರಿಯ ಶ್ರೀಗಳು ವಿಧಿವಶ

(ನ್ಯೂಸ್ ಕಡಬ) newskadaba.com ಯಾದಗಿರಿ, ಜ. 12.  ಹಿರೇಮಠದ  ಪೀಠಾಧಿಪತಿ  ಷ. ಬ್ರ. ಶ್ರೀ  ವೀರಮಹಾಂತ ಶಿವಾಚಾರ್ಯರು (48) ತೀವ್ರ ಹೃದಯಘಾತದಿಂದ ಲಿಂಗೈಕ್ಯರಾಗಿದ್ದಾರೆ ಎನ್ನಲಾಗಿದೆ.

 

ಶ್ರೀಗಳಿಗೆ ಬೆಂಗಳೂರು ರೈಲು ನಿಲ್ದಾಣದಲ್ಲಿ ತೀವ್ರ ಹೃದಯಾಘಾತ ಆದಾಗ, ಅವರಿಗೆ ನೀಡಿದ ಪ್ರಾಥಮಿಕ ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.  25ನೇ ವರ್ಷದ  ಪಟ್ಟಾಧಿಕಾರ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಗಣ್ಯರಿಗೆ ಆಹ್ವಾನ ನೀಡಲು ಶ್ರೀಗಳು ಬೆಂಗಳೂರಿಗೆ ತೆರಳಿದ್ದರು ಎನ್ನಲಾಗಿದೆ. ಬೆಂಗಳೂರಿನಲ್ಲಿ  ಬಿ. ವೈ. ವಿಜಯೇಂದ್ರ ಸೇರಿದಂತೆ ಮತ್ತಿತರ ಗಣ್ಯರಿಗೆ ಕಾರ್ಯಕ್ರಮದ ಆಹ್ವಾನ ನೀಡಿ, ರೈಲು ಮೂಲಕ ಯಾದಗಿರಿಗೆ ವಾಪಸ್ ಆಗುತ್ತಿದ್ದರು. ಮಠದ ಭಕ್ತರಾದ ರಾಯಪ್ಪಗೌಡ ದರ್ಶನಾಪುರ ಮತ್ತು ಷಣ್ಮುಖಪ್ಪ ಕಕ್ಕೇರಿ ಎನ್ನುವವರು ಶ್ರೀಗಳ ಜೊತೆಗಿದ್ದರು.

Also Read  ಉಜಿರೆ :ಆಟವಾಡುತ್ತಿದ್ದ 8 ವರ್ಷದ ಮಗುವಿನ ಅಪಹರಣ ➤ 17 ಕೋ.ರೂ. ಬೇಡಿಕೆಯಿಟ್ಟ ಅಪಹರಣಕಾರರು

error: Content is protected !!
Scroll to Top