ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ ➤ 9 ಮಂದಿಯ ವಿರುದ್ದ ಎಫ್ಐಆರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 12. ತಾಯಿ ತೇಜಸ್ವಿನಿ ಸುಲಾಖೆ ಮತ್ತು ಆಕೆಯ ಎರಡೂವರೆ ವರ್ಷದ ಮಗ ವಿಹಾನ್ ಎಲ್ ಸುಲಾಖೆ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಎಫ್‌ಐಆರ್‌ನಲ್ಲಿ ನಾಗಾರ್ಜುನ ಕಂಪನಿ ಸೇರಿ ಒಟ್ಟು 9 ಮಂದಿಯ ಹೆಸರನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ತನಿಖೆಗೆ ಹಾಜರಾಗುವಂತೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಅಧಿಕಾರಿಗಳು ಮತ್ತು ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ)ಗೆ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ. ನಾಗಾರ್ಜುನ ಕಂಪನಿ ಮತ್ತು ಅದರ ನಿರ್ದೇಶಕ ಚೈತನ್ಯ, ಜೂನಿಯರ್ ಎಂಜಿನಿಯರ್ ಪ್ರಭಾಕರ್, ಮೇಲ್ವಿಚಾರಣಾ ಪ್ರಾಜೆಕ್ಟ್ ಮ್ಯಾನೇಜರ್ ಮಥಾಯ್, ಯೋಜನಾ ವ್ಯವಸ್ಥಾಪಕ ವಿಕಾಸ್ ಸಿಂಗ್, ಮೇಲ್ವಿಚಾರಕ ಲಕ್ಷ್ಮೀಪತಿ ಹಾಗೂ ಬಿಎಂಆರ್‌ಸಿಎಲ್ ಉಪ ಮುಖ್ಯ ಎಂಜಿನಿಯರ್ ವೆಂಕಟೇಶ್ ಶೆಟ್ಟಿ, ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ್ ಬೆಂಡೆಕರಿ ಮತ್ತು ಜೂನಿಯರ್ ಎಂಜಿನಿಯರ್ ಜಾಫರ್ ಸಾದಿಕ್ ಹೆಸರನ್ನು ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆಂದು ತಿಳಿದುಬಂದಿದೆ.

Also Read  ಕಡಬ: ಸಂಪರ್ಕ ರಸ್ತೆ ಇಲ್ಲದೆ ರೋಗಿಯನ್ನು ಹೊತ್ತುಕೊಂಡು ಸಾಗಿದ ಗ್ರಾಮಸ್ಥರು.!!

error: Content is protected !!
Scroll to Top