ನಿಂತಿದ್ದ ಲಾರಿಗೆ ಕಾರು ಢಿಕ್ಕಿ ➤ ಯುವಕ ಸ್ಥಳದಲ್ಲೇ ಮೃತ್ಯು ಹಾಗೂ ಮೂವರಿಗೆ ಗಾಯ



ನ್ಯೂಸ್ ಕಡಬ) newskadaba.com ಕಾಸಗೋಡು, ಜ.08. ರಸ್ತೆ ಬದಿ ನಿಂತಿದ್ದ ಲಾರಿಯ ಹಿಂಬದಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟು, ,ಮೂವರು ಗಾಯಗೊಂಡ ಘಟನೆ ಕಾಸರಗೋಡು ನಗರದಲ್ಲಿ ವರದಿಯಾಗಿದೆ.





ಮೃತ ಯುವಕನನ್ನು ಚೆಂಗಳ ನಿವಾಸಿ ಸಂಶುದ್ದೀನ್ ಎಂಬುವರ ಪುತ್ರ ಮೊಹಮ್ಮದ್ ಸಾಹಿಲ್ (21) ಎಂದು ಗುರುತಿಸಲಾಗಿದೆ.






ಸಾಹಿಲ್ ಅಣಂಗೂರು ಕಡೆಯಿಂದ ಮೂವರು ಸ್ನೇಹಿತರ ಜೊತೆ ಕಾರಿನಲ್ಲಿ ಬರುತ್ತಿದ್ದಾಗ ನಿಂತಿದ್ದ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಸಾಹಿಲ್ ಸ್ಥಳದಲ್ಲೇ ಮೃತಪಟ್ಟಿರೆ ಗಂಭೀರವಾಗಿ ಗಾಯಗೊಂಡ ಮೂವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎನ್ನಲಾಗಿದೆ. ಈ ಬಗ್ಗೆ ಕಾಸರಗೋಡು ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

error: Content is protected !!
Scroll to Top