(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.08. ಕೊಲೆ ಮಾಡಿ ದ್ವಿಚಕ್ರ ವಾಹನದಲ್ಲಿ ಮೃತದೇಹವನ್ನು ಸಾಗಿಸಿ ಮೃತದೇಹವನ್ನು ನಿರ್ಜನ ಪ್ರದೇಶದ ರಸ್ತೆಯ ಎಸೆದು ಬಂದ ಪ್ರಕರಣವನ್ನು ಬೇಧಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ದಂಪತಿ ಸೇರಿದಂತೆ ಮೂವರನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಬಂಧಿತರನ್ನು ಎಲೆಕ್ಟ್ರಾನಿಕ್ ಸಿಟಿಯ ರೀನಾ, ಗಂಗೇಶ್ ಹಾಗೂ ಬಿಜೋಯ್ ಮತ್ತು ಕೊಲೆಯಾದ ವ್ಯಕ್ತಿಯನ್ನು ನಿಬಾಶೀಶ್ ಪಾಲ್ ಎಂದು ಗುರುತಿಸಲಾಗಿದೆ.
ಬಂಧಿತ ದಂಪತಿ ನಿಬಾಶೀಶ್ ಪಾಲ್ ಎಂಬಾತನನ್ನು ಕೊಲೆ ಮಾಡಿದ ನಂತರ ಹೆಣ ಸಾಗಿಸಲು ಮತ್ತೊಬ್ಬ ಆರೋಪಿ ಬಿಜೋಯ್ ನ ಸಹಾಯ ಪಡೆದಿದ್ದರು ಎನ್ನುವುದು ತನಿಖೆ ವೇಳೆ ಪತ್ತೆಯಾಗಿದೆ. ಎಂದು ಡಿಸಿಪಿ ಚಂದ್ರಶೇಖರ ಬಾಬಾ ತಿಳಿಸಿದರು. ರೀನಾ ಮತ್ತು ಗಂಗೇಶ್ ಗಂಡ ಹೆಂಡತಿಯಾಗಿದ್ದಾರೆ. ಆದರೂ ರೀನಾ ಮತ್ತು ಕೊಲೆಯಾದ ನಿಬಾಶೀಶ್ ಪಾಲ್ ಅಕ್ರಮ ಸಂಬಂಧ ಹೊಂದಿದ್ದರು. ಒಂದು ದಿನ ರೀನಾ ಪತಿ ಗಂಗೇಶ್ ಸ್ವಂತ ರಾಜ್ಯ ಉತ್ತರ ಪ್ರದೇಶಕ್ಕೆ ಹೋಗಿದ್ದ. ಈ ನಡುವೆ ರೀನಾಗೆ ನಿಬಾಶೀಶ್ ಕಿರುಕುಳ ಕೊಡಲು ಶುರು ಮಾಡಿದ್ದಾನೆ. ಹಣಕ್ಕಾಗಿ ಬೇರೆಯವರ ಜೊತೆ ಮಲಗಲು ರೀನಾಗೆ ಒತ್ತಾಯ ಮಾಡುತ್ತಿದ್ದ. ಹೀಗಾಗಿ ತನ್ನ ಪತಿ ಗಂಗೇಶ್‌ಗೆ ಕರೆ ಮಾಡಿದ ರೀನಾ, ವಾಪಸ್ ಬರುವಂತೆ ಸೂಚಿಸಿದ್ದಾಳೆ. ಪತಿಯನ್ನು ಕರೆಸಿಕೊಂಡ ರೀನಾ, ನಿಬಾಶೀಶ್ ನೀಡಿದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾಳೆ. ಹೀಗಾಗಿ ದಂಪತಿ ಸೇರಿಕೊಂಡು ನಿಬಾಶೀಶ್ ಕೊಲೆ ಮಾಡಲು ಸಂಚು ರೂಪಿಸುತ್ತಾರೆ. ಅದರಂತೆ ನಿಬಾಶೀಶ್‌ಗೆ ಕಂಠಪೂರ್ತಿ ಕುಡಿಸಿ ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಇದಕ್ಕೂ ಮುನ್ನ ಪಾಲ್‌ಗೆ ಊಟದಲ್ಲಿ ಗಾಂಜಾದ ಬೀಜವನ್ನು ಹಾಕಿ ಅಮಲು ಬರುವಂತೆ ಮಾಡಿದ್ದರು. ಅಮಲು ಬಂದ ಬಳಿಕೆ ಸೀರೆಯಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.