ಪ್ರಿಯಕನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ ➤ ಕೊಲೆಯ ರಹಸ್ಯ ಬಹಿರಂಗಪಡಿಸಿದ ಮಗಳು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.08.  ಪ್ರಿಯಕರನೊಂದಿಗೆ ಸೇರಿ ಪತಿಯ ಹತ್ಯೆ ಮಾಡಿ, ಅತಿಯಾದ ಮದ್ಯಪಾನದಿಂದ ಮೃತಪಟ್ಟಿದ್ದಾನೆ ಎಂದು ಬಿಂಬಿಸಿದ್ದ ಪತ್ನಿಯನ್ನು ಮತ್ತು ಆಕೆಯ ಪ್ರಿಯಕನನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಬಂಧಿತ ಆರೋಪಿಯನ್ನು ಅನಿತ (35) ಮತ್ತು ಆಕೆಯ ಪ್ರಿಯಕರ ರಾಕೇಶ್ ಹಾಗೂ ಮೃತರನ್ನು ಸಂಜಯನಗರದ ನಿವಾಸಿ ಆಂಜನೇಯ (45) ಎಂದು ಗುರುತಿಸಲಾಗಿದೆ.

ಟೈಲ್ಸ್ ಕೆಲಸಗಾರನಾಗಿದ್ದ ಆಂಜನೇಯ, ನಿತ್ಯವೂ ಮದ್ಯಪಾನ ಮಾಡುತ್ತಿದ್ದು, ಕ್ಷುಲ್ಲಕ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಾಕೇಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಅನಿತಾ ಪತಿಯನ್ನು ಮುಗಿಸಲು ಸಂಚು ರೂಪಿಸಿದ್ದಳು. ಆಂಜನೇಯ ಕುಡಿದ ಅಮಲಿನಲ್ಲಿ ಮನೆಗೆ ಬಂದು ಮಲಗಿದ್ದ ವೇಳೆ ಅನಿತಾ ಮತ್ತು ಆಕೆಯ ಪ್ರಿಯಕರ ರಾಕೇಶ್ ನನ್ನು ಮನೆಗೆ ಕರೆಸಿಕೊಂಡು, ತನ್ನ 14 ಮತ್ತು 11 ವರ್ಷದ ಇಬ್ಬರು ಮಕ್ಕಳ ಸಮ್ಮುಖದಲ್ಲಿಯೇ ತಲೆದಿಂಬು ಬಳಸಿ ಉಸಿರುಗಟ್ಟಿಸಿ ಹತ್ಯೆ ಮಾಡಿ ಬಳಿಕ ಮಕ್ಕಳಿಗೆ ತಂದೆ ಕೆಟ್ಟ ವ್ಯಕ್ತಿ ಎಂದು ಹೇಳಿದ್ದಾಳೆ ಎನ್ನಲಾಗಿದೆ. ಮಕ್ಕಳನ್ನು ತೊರೆದ ಅನಿತಾ, ರಾಕೇಶ್ ಜೊತೆಗೆ ಹೋಗಿದ್ದಾಳೆ. ನಂತರ ಮಕ್ಕಳು ತಮ್ಮ ಅಜ್ಜಿಯ ಮನೆಗೆ ಹೋಗಿದ್ದು, ಹತ್ಯೆ ಬಗ್ಗೆ ಅಜ್ಜಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅನಿತಾ ಬಗ್ಗೆ ಆಕೆಯ 14 ವರ್ಷದ ಪುತ್ರಿಯೇ ಪೊಲೀಸರಿಗೆ ದೂರು ನೀಡಿದ್ದಾಳೆ, ಆಕೆಯ ಹೇಳಿಕೆಯ ಆಧಾರದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

error: Content is protected !!

Join the Group

Join WhatsApp Group