ಯೂರಿಯಾ ಮಿಶ್ರಿತ ನೀರು ಕುಡಿದು ನಾಲ್ಕು ಹಸುಗಳು ಮೃತ್ಯು..!!

(ನ್ಯೂಸ್ ಕಡಬ) newskadaba.com ಹನೂರು, ಜ.08.  ಬೆಳೆಗಳಿಗೆ ಹಾಕುವ ಯೂರಿಯಾ ಗೊಬ್ಬರ ಮಿಶ್ರಣವಾಗಿರುವ ನೀರನ್ನು ಕುಡಿದು ನಾಟಿ ಹಸುಗಳು ಧಾರುಣವಾಗಿ ಮೃತಪಟ್ಟ ಘಟನೆ ಹನೂರಿನ ಮುತ್ತು ಶೆಟ್ಟಿಯೂರು ಗ್ರಾಮದಲ್ಲಿ ವರದಿಯಾಗಿದೆ.


ತಾಲೂಕಿನ ರಾಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತು ಶೆಟ್ಟಿಯೂರು ನಿವಾಸಿಗಳಾದ ಮುದಲೈಮುತ್ತು ತೇರೆಸ್ಸಾಮೇರಿ ಎಂಬುವರಿಗೆ ಸೇರಿದ ನಾಲ್ಕು ಹಸುಗಳು ಮೃತಪಟ್ಟಿದೆ. ಮುದಲೈ ಮುತ್ತು ಅವರಿಗೆ ಸೇರಿದ ಹಸುಗಳು ಎಂದಿನಂತೆ ಕಾಡಿನಿಂದ ಮನೆಗಳಿಗೆ ಹಿಂತುರುಗಿ ಬರುವಾಗ ಸಂಜೆ ಸಮಯದಲ್ಲಿ ಪಕ್ಕದ ಜಮೀನಿನ ತೋಟದವರು ಬೆಳೆಗಳಿಗೆ ಹಾಕುವ ಯೂರಿಯಾವನ್ನು ನೀರು ಹರಿಯುವ ಬಿಂದುವಿನಲ್ಲಿ ಇಟ್ಟಿದ್ದಾರೆ ಎನ್ನಲಾಗಿದೆ. ಇದೇ ವೇಳೆ ನೀರು ಹರಸಿ ಬಂದ ಹಸುಗಳು ಯೂರಿಯಾ ಗೊಬ್ಬರ ಮಿಶ್ರಣವಾಗಿರುವ ನೀರನ್ನು ಕುಡಿದಿವೆ. ಇದರಿಂದ ನಾಲ್ಕು ಹಸುಗಳು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ಹಸುಗಳನ್ನು ಕಳೆದುಕೊಂಡ ಕುಟುಂಬಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಿಹಾರ ನೀಡಲು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

Also Read  ಭಾರತದ ರಾಷ್ಟ್ರಧ್ವಜ ಮೇಲೆ ಆಟೋಗ್ರಾಫ್ ಹಾಕಿದ ಅಫ್ರಿದಿ ➤ನೆಟ್ಟಿಗರ ಕಿಡಿ

error: Content is protected !!
Scroll to Top