(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.08. ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಅವರು ಭಾನುವಾರದಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಕನ್ನಡಪ್ರಭ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಇವರು, ವ್ಯಕ್ತಿ ವಿಚಾರ, ಸಮಕಾಲೀನ .ರಾಜಕೀಯ ವಿಶ್ಲೇಷಣೆ, ಷೇರುಪೇಟೆ ಸಮಾಚಾರ ಅಂಕಣ ಮೂಲಕ ಗಮನ ಸೆಳೆದಿದ್ದರು. ಖಾದ್ರಿ ಶಾನಣ್ಣ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗೂ ಭಾಜನರಾಗಿದ್ದರು ಎಂದು ತಿಳಿದುಬಂದಿದೆ.ಬೆಂಗಳೂರು ಎಲ್ ಐಸಿ ಕಾಲನಿಯ ತಮ್ಮ ಸ್ವಗೃಹದಲ್ಲಿ ವಯೋಸಹಜ ಕಾರಣದಿಂದ ಅವರು ನಿಧನರಾದರೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.