ಯುವಕನೋರ್ವನ ಬರ್ಬರ ಹತ್ಯೆ..!!



(ನ್ಯೂಸ್ ಕಡಬ) newskadaba.com ಜಗಳೂರು, ಜ.08. ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಗಳೂರು ತಾಲೂಕಿನ ಗೌರಿಪುರ ಗ್ರಾಮದ ಬಳಿ ವರದಿಯಾಗಿದೆ.





ಮೃತ ಯುವಕನನ್ನು ರಾಮಕೃಷ್ಣ (30) ಎಂದು ಗುರುತಿಸಲಾಗಿದೆ.






ರಾಮಕೃಷ್ಣ ಸ್ನೇಹಿತರ ಜೊತೆ ಹೊಸಕೆರೆ ಸಮೀಪದ  ಡಾಬಾದಲ್ಲಿ ಪಾರ್ಟಿ ಮಾಡುತ್ತಿದ್ದ ವೇಳೆ ಪರಸ್ಪರ ವಾಗ್ವಾದ ನಡೆದಿದೆ ಬಳಿಕ ಸ್ನೇಹಿತರು ರಾಮಕೃಷ್ಣನಿಗೆ ಕಬ್ಬಿಣದ ರಾಡ್ ಮತ್ತು ಕಲ್ಲುಗಳಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

 

 

error: Content is protected !!
Scroll to Top