ಕಾಂಗ್ರೆಸ್ ಮುಖಂಡನ ಸಹೋದರನ ಮೇಲೆ ಗುಂಡಿನ ದಾಳಿ

 (ನ್ಯೂಸ್ ಕಡಬ) newskadaba.com ಕಲಬುಲಗಿ, ಜ.07.   ಆಳಂದ ಚೆಕ್ ಪೋಸ್ಟ್ ಹತ್ತಿರದಲ್ಲಿ ಶನಿವಾರ ಮಧ್ಯಾಹ್ನ ಜೀಪಿನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಕಲಬುರಗಿಯಲ್ಲಿ ವರದಿಯಾಗಿದೆ.

ಗಾಯಗೊಂಡವರನ್ನು ಚನ್ನವೀರ ಎಂದು ಗುರುತಿಸಲಾಗಿದೆ. ಇವರು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸಂತೋಷ ಪಾಟೀಲ್ ದಣ್ಣೂರ ಅವರ ಸಹೋದರರಾಗಿದ್ದಾರೆ.  ಚೆನ್ನವೀರ ಪಾಟೀಲ್ ದಣ್ಣೂರ ಹಾಗೂ ಜೊತೆಗಿದ್ದ ಹುಡುಗನ ಮೇಲೆ ಫೈರಿಂಗ್ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬೊಲೆರೋ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿಗಳು ಚನ್ನವೀರ ಕೈಗೆ ಗುಂಡು ಹಾರಿಸಿದ್ದು, ಇದನ್ನು ನೋಡಿದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಡಿಸಿಪಿ ಅಡ್ಡೂರು ಶ್ರೀನಿವಾಸಲು ಭೇಟಿ ಪರಿಶೀಲನೆ ನಡೆಸಿದರು.

Also Read  ಐಸ್ ಕ್ರೀಮ್ ದಾಸ್ತಾನು ಕೇಂದ್ರದಲ್ಲಿ ಭಾರೀ ಬೆಂಕಿ ಅವಘಡ..!   ➤ ಅಪಾರ ನಷ್ಟ

error: Content is protected !!
Scroll to Top