ರಾಜ್ಯದ ಐವರು ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ವಿಶೇಷ ಕಾರ್ಯಚರಣೆ ಪದಕ ಪ್ರದಾನ

(ನ್ಯೂಸ್ ಕಡಬ) newskadaba.com ಕಾರವಾರ, ಜ.07.  ‘ಕೇಂದ್ರ ಗೃಹಮಂತ್ರಿ ವಿಶೇಷ ಕಾರ್ಯಚರಣೆ ಪದಕ’ಕ್ಕೆ ರಾಜ್ಯದ ಐವರು ಪೊಲೀಸರು ಭಾಜನರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಕೇಂದ್ರ ಗೃಹ ಮಂತ್ರಿಗಳ ವಿಶೇಷ ಕಾರ್ಯಾಚರಣೆ ಪದಕಕ್ಕೆ ಆಯ್ಕೆಯಾಗಿವರನ್ನು ಹೊನ್ನಾವರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎಸ್.ಆರ್.ಶ್ರೀಧರ್, ಸಿವಿಲ್ ಹೆಡ್ ಕಾನ್ಸ್‌ಟೇಬಲ್ ಕೃಷ್ಣ ಗೌಡ, ಬೆಂಗಳೂರು ಕಾಟನ್‌ಪೇಟೆ ಪಿಐ ಜಿ.ಬಾಲರಾಜು, ಬೆಂಗಳೂರಿನ ನಿವೃತ್ತ ಎಎಸ್‌ಐ ಎಂ.ಶೌಕತ್ ಅಲಿ, ಬೆಂಗಳೂರು ಐಎಸ್‌ಡಿ ಹೆಡ್ ಕಾನ್ಸ್ಟೇಬಲ್ ಪಿ.ಸೋಮಶೇಖರ  ಎಂದು ಗುರುತಿಸಲಾಗಿದೆ. ಅವರಿಗೆ  ಕೋರಮಂಗಲ ಪರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಪದಕ ಪ್ರದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಉನ್ನತ ಮಟ್ಟದ ಯೋಜನೆ, ದೇಶ, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಸಮಾಜದ ದೊಡ್ಡ ವರ್ಗಗಳ ಭದ್ರತೆಯ ಮೇಲೆ ಮಹತ್ವದ ಪ್ರಭಾವ ಬೀರುವ ಕಾರ್ಯಾಚರಣೆಗಳನ್ನು ಗುರುತಿಸುವ ಉದ್ದೇಶದಿಂದ 2018ರಲ್ಲಿ ಈ ಪದಕವನ್ನು ಸ್ಥಾಪಿಸಲಾಗಿದೆ.

Also Read  ಉಡುಪಿ: ಕಾರ್ಕಳ 8ನೇ ಸುತ್ತು ➤ ಸುನೀಲ್ ಕುಮಾರ್ಗೆ ಮುನ್ನಡೆ

error: Content is protected !!
Scroll to Top