ಪಿಕ್‌ನಿಕ್‌ಗೆ ಹೊರಟಿದ್ದ ವಿದ್ಯಾರ್ಥಿನಿಯರ ಟ್ರಾಕ್ಟರ್ ಪಲ್ಟಿ ➤ ಓರ್ವ ವಿದ್ಯಾರ್ಥಿನಿ ಮೃತ್ಯು, 30ಕ್ಕೂ ಹೆಚ್ಚು ಮಂದಿಗೆ ಗಾಯ

 (ನ್ಯೂಸ್ ಕಡಬ) newskadaba.com ಕಾರವಾರ, ಜ.07.   ಪ್ರವಾಸಕ್ಕೆಂದು ತೆರಳುತ್ತಿದ್ದ ವೇಳೆ  ಕೆಪಿಸಿ ಸರಕಾರಿ ಪಿಯುಸಿ ಕಾಲೇಜು ವಿದ್ಯಾರ್ಥಿನಿಯರ ಟ್ರಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದು, 30ಕ್ಕೂ ಅಧಿಕ ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆ ಕಾರವಾರದ ಮಳಗಿಯ ಬಳಿ ವದರಿಯಾಗಿದೆ.

ಕಾಲೇಜಿನ 40ಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರು ಹಾಗೂ 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಎರಡು ಟ್ರಾಕ್ಟರ್‌ನಲ್ಲಿ ಮಳಗಿ ಹತ್ತಿರದಲ್ಲಿರುವ ತಾಣವೊಂದನ್ನು ವೀಕ್ಷಣೆ ಮಾಡಲು ತೆರಳಿದ್ದರು. ಬಳಿಕ ಸಮೀಪದ ಹೋಟೆಲ್‌ವೊಂದರಲ್ಲಿ ಊಟ ಮುಗಿಸಿ ಮರಳಿ ಕಾಲೇಜಿಗೆ ಬರುತ್ತಿದ್ದ ಸಂದರ್ಭದಲ್ಲಿ ಮಳಗಿ ಹತ್ತಿರದ ಪೆಟ್ರೋಲ್ ಪಂಪ್ ಹತ್ತಿರ ಟ್ರಾಕ್ಟರ್‌ನ ಟ್ರಾಲಿ ಕೊಂಡಿ ಕಳಚಿ ಈ ಅವಘಡ ನಡೆದಿದೆ ಎನ್ನಲಾಗಿದೆ. ವಿದ್ಯಾರ್ಥಿನಿಯರು ಕ್ಷಣ ಮಾತ್ರದಲ್ಲಿ ಟ್ರಾಲಿ ಅಡಿಯಾಗಿ ಸಿಲುಕಿಕೊಂಡರು. ಸ್ಥಳೀಯರ ಸಹಾಯದಿಂದ ಟ್ರಾಲಿಯನ್ನು ಎತ್ತಿ ಮಕ್ಕಳನ್ನು ಎಳೆದು ಹೊರತೆಗೆದು ಶಿರಸಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

Also Read  ಕಡಬ: ಜ. 24 ರಂದು ಮೆರವಣಿಗೆ ಮೂಲಕ ಸಚಿವ ಎಸ್.ಅಂಗಾರರಿಗೆ ಅಭಿನಂದನೆ

error: Content is protected !!
Scroll to Top