ಮಹಿಳೆಯ ಮೇಲೆ ಚಿರತೆ ದಾಳಿ ➤ ಸ್ವಲ್ಪದರಲ್ಲೇ ತಪ್ಪಿದ ಅನಾಹುತ

(ನ್ಯೂಸ್ ಕಡಬ) newskadaba.com ಮಂಡ್ಯ, ಜ.07.   ಕೊಟ್ಟಿಗೆಗೆ ಹೋದ ಗೃಹಿಣಿಯೋರ್ವರ ಮೇಲೆ ಚಿರತೆಯೊಂದು ಏಕಾ ಏಕಿ ಯಾಗಿ ದಾಳಿ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ಗಾಯಳುವನ್ನು ಬಸಮ್ಮಣ್ಣಿ  ಎಂದು ಗುರುತಿಸಲಾಗಿದೆ.

 

ಮಹಿಳೆಯು ಗಾಬರಿಯಿಂದ ಕಿರುಚಾಡುತ್ತಾ ಚಿರತೆಗೆ ಒದ್ದಿದ್ದಾರೆ ಆಗ ಚಿರತೆ ಗುಂಡಿಯೊಳಗೆ ಬಿದ್ದಿದೆ ಎನ್ನಲಾಗಿದೆ. ಮಹಿಳೆಯ ಕೂಗು ಕೇಳುತ್ತಿದ್ದಂತೆ ಅಕ್ಕ ಪಕ್ಕದ ಜನರು ಬಂದಿದ್ದಾರೆ. ತಕ್ಷಣವೇ ಚಿರತೆ ಅಲ್ಲಿಂದ ಓಡಿ ಹೋಗಿದೆ. ಮಹಿಳೆಯು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಬಂದಿದ್ದು ಚಿರತೆಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಬಿಟ್ಟು ಬಿಡದೆ ಕಾಡುತ್ತಿದೆ ಚಿರತೆ, ಶ್ವಾನದ ಮೇಲೆಯು ದಾಳಿ ಮಾಡಿತು. ಈಗ ಮನುಷ್ಯರ ಮೇಲೆ ದಾಳಿ ಮಾಡಲು ಆರಂಭಿಸದೆ. ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.

error: Content is protected !!