ಹೆಜ್ಜೇನು ದಾಳಿಗೆ ಕೋಟಿ ಮೌಲ್ಯದ 2 ಕುದುರೆ ಮೃತ್ಯು!

(ನ್ಯೂಸ್ ಕಡಬ) newskadaba.com ಕುಣಿಗಲ್, ಜ.07.  ಹೆಜ್ಜೇನು ದಾಳಿಗೆ ಸಿಲುಕಿ ಸ್ಟಡ್ ಫಾರಂನಲ್ಲಿ ವಂಶಭಿವೃದ್ಧಿಗೆಂದು ಬಳಸುತ್ತಿದ್ದ ತಲಾ  1 ಕೋಟಿಗೂ ಹೆಚ್ಚು ಮೌಲ್ಯದ 2 ಕುದುರೆಗಳು ಮೃತಪಟ್ಟ ಘಟನೆ ಕುಣಿಗಲ್ ನಲ್ಲಿ ವರದಿಯಾಗಿದೆ.

ಮೃತ ಕುದುರೆಗಳನ್ನು ಅಮೆರಿಕ ಮೂಲದ ಏರ್ ಸಪೋರ್ಟ್ (15) ಮತ್ತು ಐರ್ಲೆಂಡ್ ಮೂಲದ ಸನಸ್ ಪರ್ ಅಕ್ಷಮ್ (10) ಎಂದು ಗುರುತಿಸಲಾಗಿದೆ.

ಬಯಲಿನಲ್ಲಿ ಮೇಯಲುವಾಗ ಏಕಾಏಕಿಯಾಗಿ ಹೆಜ್ಜೇನು ದಾಳಿ ಮಾಡಿವೆ ಎನ್ನಲಾಗಿದೆ. ಸ್ಟಡ್ ಫಾರಂ ವ್ಯವಸ್ಥಾಪಕ ಡಾ. ದಿನೇಶ್ ಮತ್ತು ಮನೋಜ್ ನೇತೃತ್ವದ ತಂಡ ತೀವ್ರ ಅಸ್ವಸ್ಥಗೊಂಡಿದ್ದ ಕುದುರೆಗಳಿಗೆ ಚಿಕಿತ್ಸೆ ನೀಡಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎನ್ನಲಾಗಿದೆ.

error: Content is protected !!
Scroll to Top