ಆಭರಣ ಕಳುವಾಗಿದೆ ಎಂದು ದೂರು ನೀಡಿದ್ದ ಮಹಿಳೆಯೇ ಕಳ್ಳಿ..!

 (ನ್ಯೂಸ್ ಕಡಬ) newskadaba.com ಬೇತಮಂಗಲ, ಜ.07.  ಮದುವೆ ಆಮಂತ್ರಣ ಕೊಡುವ ನೆಪದಲ್ಲಿ ಬಂದ ಇಬ್ಬರು ಮಹಿಳೆಯರು ಮನೆಯವರನ್ನೆಲ್ಲಾ ಪ್ರಜ್ಞೆ ತಪ್ಪಿಸಿ 200 ಗ್ರಾಂ ಆಭರಣ ದೋಚಿದ್ದರು ಎಂದು ದೂರು ದಾಖಲಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಬೇತಮಂಗಲ ಪಟ್ಟಣದ 2ನೇ ಬ್ಲಾಕ್ ನಿವಾಸಿ ನೂರ್ ಅಮೀನ್ ಎಂಬಲ್ಲಿ ವರದಿಯಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಧರಣಿದೇವಿ ಮಾಲಗತ್ತಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಶ್ವಾನದಳ ಸೇರಿದಂತೆ ಇತರ ವಿಶೇಷ ಪೊಲೀಸ್ ತಂಡಗಳು ಪರಿಶೀಲನೆ ನಡೆಸಿವೆ. ತನಿಖೆಯನ್ನು ಕೈ ಗೆತ್ತಿಕೊಂಡ ಪಿ ಎಸ್ಐ ಜಗದೀಶ್ ರೆಡ್ಡಿ ಮತ್ತು ತಂಡವು ಸೂಕ್ಷ್ಮವಾಗಿ ತನಿಖೆ ನಡೆಸಿದಾಗ ದೂರು ನೀಡಿದ ಮಹಿಳೆಯ ಮೇಲೆಯೇ ಅನುಮಾನ ಬಂದಿದೆ. ಆಗ ಮಹಿಳೆಯನ್ನು ವಿಚಾರಣೆ ನಡೆಸಿದಾಗ ತಾನೇ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

Also Read  ಮಾ.23 ರಂದು ಅರೆ ಸೇನಾಪಡೆ ನಿವೃತ್ತ (ಮಾಜಿ) ಯೋಧರ ಸಮಾವೇಶ

error: Content is protected !!
Scroll to Top