ಚಿಕಿತ್ಸೆ ನೀಡುವುದಾಗಿ ನಂಬಿಸಿ ರೂ.8.08 ಲಕ್ಷ ವಂಚನೆ ➤ ನಕಲಿ ಆಯುರ್ವೇದ ವೈದ್ಯ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 04.  72 ವರ್ಷದ ವೃದ್ಧ ಮಹಿಳೆಗೆ ಚಿಕಿತ್ಸೆ ನೀಡುವುದಾಗಿ ಹೇಳಿ ವ್ಯಕ್ತಿಯೋರ್ವನಿಂದ 8.08 ಲಕ್ಷ ರೂಪಾಯಿ ವಂಚಿಸಿರುವ ಆರೋಪದ ಮೇಲೆ ರಾಜಸ್ಥಾನದ ನಕಲಿ ಆಯುರ್ವೇದ ವೈದ್ಯ ಹಾಗೂ ಆತನ ಮಗ ಮತ್ತು ಸಹಚರನನ್ನು ವಿಲ್ಸನ್ ಗಾರ್ಡನ್ ರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಬಂಧಿತರನ್ನು ಮೊಹಮ್ಮದ್ ಸಮೀನ್ ಅಲಿಯಾಸ್ ಡಾ ಮಲಿಕ್ ಅಲಿ (50), ಈತನ ಮಗ ಸೈಫ್ ಅಲಿ (25) ಮತ್ತು ಮೊಹಮ್ಮದ್ ರಹೀಸ್ (55) ಎಂದು ಗುರುತಿಸಲಾಗಿದೆ.

ಸಮೀನ್ ನನ್ನ 72 ವರ್ಷದ ತಾಯಿಗೆ ಚಿಕಿತ್ಸೆ ಕೊಡುವುದಾಗಿ ಹೇಳಿ ಮನೆಗೆ ಬಂದಿದ್ದರು. ತಾಯಿಯ ಕಾಲಿನಿಂದ ಸ್ವಲ್ಪ ಕೀವು ತೆಗೆದು, ಇನ್ನೂ ಕೆಲವು ಬಾರಿ ಚಿಕಿತ್ಸೆ ನೀಡುವುದಾಗಿ ಹೇಳಿ ಹೋಗಿದ್ದರು. ಈ ವೇಳೆ ಹಣವನ್ನು ಪಡೆದಕೊಂಡಿದ್ದರು. ಆದರೆ, ನಂತರ ಕೈಗೆ ಸಿಕ್ಕಿರಲಿಲ್ಲ ಎಂದು ರಾಥೋಡ್ ಅವರು ಹೇಳಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಆರೋಪಿಗಳು ನೆಲಮಂಗಲದಲ್ಲಿರುವ ಕುರಿತು ಮಾಹಿತಿ ತಿಳಿದುಬಂದಿತ್ತು. ಅಕ್ರಮವಾಗಿ ಹಣ ಗಳಿಸಿ ಆರೋಪಿಗಳು ಅದ್ದೂರಿಯಾಗಿ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರಿಂದ ಚಿಕಿತ್ಸೆಗೆ ಬಳಸಿದ್ದ ವಸ್ತುಗಳು, 3.5 ಲಕ್ಷ ರೂಪಾಯಿ ನಗದು, ನಾಲ್ಕು ಕಾರುಗಳು ಮತ್ತು ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Also Read  ಕಂದ್ರಪ್ಪಾಡಿ ಅಂಚೆ ಕಛೇರಿ ಕಟ್ಟಡಕ್ಕೆ ತಾತ್ಕಾಲಿಕ ದುರಸ್ಥಿ

 

error: Content is protected !!
Scroll to Top