ಪರಿಚಯದವರ ಮನೆಯಲ್ಲಿ ಕಳ್ಳತನ ➤ ಮೂವರು ಮಹಿಳೆಯರ ಬಂಧನ

(ನ್ಯೂಸ್ ಕಡಬ) newskadaba.com .  ಮೈಸೂರು, ಜ. 04.   ಇಲ್ಲಿನ ಕುವೆಂಫು ನಗರದ ಎ & ಬಿ ಬ್ಲಾಕ್​ನ ನಿವಾಸಿ ಪೂರ್ಣಿಮಾ ಎನ್ನುವವರ ಮನೆಯಲ್ಲಿ ಕಳ್ಳತನ ಮಾಡಿರುವ ಮೂವರು ಆರೋಪಿಗಳನ್ನು ಕುವೆಂಪು ನಗರ ಪೊಲೀಸರು ಬಂಧಿಸಿರುವ ಘಟನೆ ಮೈಸೂರಿನಲ್ಲಿ ವರದಿಯಾಗಿದೆ.

ಬಂಧಿತರನ್ನು ಅಮೃತ ,ಅಶ್ವಿನಿ, ಶೃತಿ ಎಂಬ ಗುರುತಿಸಲಾಗಿದೆ.ಇನ್ನು ಆರೋಪಿಗಳು ಕಳ್ಳತನಕ್ಕೆ ಬಳಸಿದ್ದ ಸ್ಕೂಟರ್ ಹಾಗೂ ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ ಆರೋಪಿ ಅಮೃತ ಪೂರ್ಣಿಮಾ ಅವರಿಗೆ ಡ್ರೈವಿಂಗ್ ಹೇಳಿಕೊಡುತ್ತಿದ್ದರು ಎನ್ನಲಾಗಿದೆ.

Also Read  ಬಿಜೆಪಿ ಕಾರ್ಯಕರ್ತರು ತೆರಳುತ್ತಿದ್ದ ಕಾರು ಭೀಕರ ಅಪಘಾತ ➤ ನಾಲ್ವರ ಸ್ಥಿತಿ ಗಂಭೀರ

ನಕಲಿ ಕೀ ಮಾಡಿಸಿ ಡಿಸೆಂಬರ್ 31 ರಂದು 7.5 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ 12 ಸಾವಿರ ರೂ. ಕಳ್ಳತನ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಪೂರ್ಣಿಮಾ ಕುವೆಂಪು ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ತಿಳಿದು ಬಂದಿದೆ.

error: Content is protected !!
Scroll to Top