ಅನಿಲ ಸೋರಿಕೆ ➤ ನಾಲ್ವರಿಗೆ ಗಾಯ

(ನ್ಯೂಸ್ ಕಡಬ) newskadaba.com .   ಹುಬ್ಬಳ್ಳಿ, ಜ. 03:  ಅಡುಗೆ ಅನಿಲ ಸೋರಿಕೆಯಿಂದಾಗಿ ಅಗ್ನಿ ಅಪಘಡ ಸಂಭವಿಸಿದ  ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಹುಬ್ಬಳ್ಳಿ ಜಿಲ್ಲೆಯ ವೀರಾಪೂರ ಓಣಿಯ ಶ್ರೀ ಗಣಪತಿ ಈಶ್ವರ ದೇವಸ್ಥಾನದಲ್ಲಿ ಸಂಭವಿಸಿದೆ.

ಈ ಘಟನೆಯಿಂದ ದೇವಸ್ಥಾನದ ಅರ್ಚಕ, ಮಗು ಹಾಗೂ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮಗು ಹಾಗೂ ಇಬ್ಬರು ಮಹಿಳೆಯರು ದೇವರ ದರ್ಶನಕ್ಕೆ ಆಗಮಿಸಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಬೆಂಡಿಗೇರಿ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

Also Read  ಸಿದ್ದು ಹೈಕಮಾಂಡ್ ಕೈಗೊಂಬೆ, ರಬ್ಬರ್ ಸ್ಟ್ಯಾಂಪ್ ಸಿಎಂ ಎನ್ನಲು ಈ ಪತ್ರ ಸಾಕ್ಷಿ ➤ ರಾಜ್ಯಾಧ್ಯಕ್ಷ ನಳಿನ್ ಕುಮಾರ್

error: Content is protected !!
Scroll to Top