ಆಟೊ ಪಲ್ಟಿ ➤ ಓರ್ವ ಮಹಿಳೆ ಮೃತ್ಯು ಹಾಗೂ ಆರು ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.comಕೊಪ್ಪಳ, ಜ.03. ಆಟೊವೊಂದು ಪಲ್ಟಿಯಾದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಹಾಗೂ ಆರು ಮಂದಿ ಗಾಯಗೊಂಡ ಘಟನೆ ಕೊಪ್ಪಳ ಸಮೀಪದ ಒಜೋನಹಳ್ಳಿ ಕ್ರಾಸ್ ಬಳಿ ವರದಿಯಾಗಿದೆ.

ಮೃತಪಟ್ಟವರನ್ನು ಅನ್ನಪೂರ್ಣಮ್ಮ (38) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗೌಂಡಿ ಕೆಲಸ ಮಾಡುವ ಕಾರ್ಮಿಕರ ಆಟೊದಲ್ಲಿ ತೆರಳುವಾಗ ಪ್ರಾಣಿಯೊಂದು ಅಡ್ಡ ಬಂದಿದ್ದರಿಂದ ಪಲ್ಟಿಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

error: Content is protected !!

Join the Group

Join WhatsApp Group