ಆನೆ ಸೆರೆಹಿಡಿಯಲು ತೋಡಿದ್ದ ಕಂದಕಕ್ಕೆ ಬಿದ್ದ ಮರಿಯಾನೆ..!

(ನ್ಯೂಸ್  ಕಡಬ) newskadaba.com ಹಾಸನ, ಜ. 02.  ಜನರಿಗೆ ನಿರಂತರವಾಗಿ ಕಾಟ ನೀಡುತ್ತಿದ್ದ ಮರಿಕಾಡಾನೆಯೊಂದು ಜನರೇ ತೋಡಿದ್ದ ಕಂದಕಕ್ಕೆ ಬಿದ್ದ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲು ಎಂಬಲ್ಲಿ ವರದಿಯಾಗಿದೆ.

ಕಾಡಾನೆಗಳ ಉಪಟಳದಿಂದ ರೋಸಿ ಹೋಗಿದ್ದ ಜನರು ಶಾಶ್ವತ ಪರಿಹಾರಕ್ಕೆ ಒತ್ತಾಯಿಸುತ್ತಲೇ ಇದ್ದರು. ಆದರೆ ಸರ್ಕಾರ ಶಾಶ್ವತ ಪರಿಹಾರ ಕಂಡುಹಿಡಿಯದೆ ಇದ್ದುದರಿಂದ ಗ್ರಾಮಸ್ಥರು ಒಟ್ಟಾಗಿ ಆನೆಯ ಸೆರೆಹಿಡಿಯಲು ದೊಡ್ಡ ಕಂದಕ ತೋಡಿದ್ದರು. ಸದ್ಯ ಇದೀಗ ಗ್ರಾಮಸ್ಥರು ತೋಡಿದ್ದ ಕಂದಕಕ್ಕೆ ಮರಿಯಾನೆಯೊಂದು ಬಿದ್ದಿದ್ದು,  ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Also Read  ➤ ನಕಲಿ ‌ಮಾರ್ಕ್ಸ್ ಕಾರ್ಡ್ ತಯಾರಿಸುತ್ತಿದ್ದ ಬೃಹತ್ ಜಾಲ ಪತ್ತೆ!

 

error: Content is protected !!
Scroll to Top