ಬ್ರಿಜ್ ಗೆ ಕಾರು ಢಿಕ್ಕಿ ➤ ಇಬ್ಬರು ಮೃತ್ಯು.!

(ನ್ಯೂಸ್ ಕಡಬ) newskadaba.com ಹುಣಸಗಿ, ಡಿ. 31. ಬ್ರಿಜ್‍ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಹುಣಸಗಿ ಸಮೀಪದ ರಾಜನ್ ಕೊಳ್ಳೂರ್ ಬಳಿ ವರದಿಯಾಗಿದೆ.

ಮೃತರನ್ನು ಕಾಮನಟಗಿ ಗ್ರಾಮದ ಮಲ್ಲಿಕಾರ್ಜುನ ಚೆನ್ನಪ್ಪ ಮಡಿವಾಳ (35) ಹಾಗೂ ಬಲಶೆಟ್ಟಿಹಾಳ್ ಗ್ರಾಮದ ಪರಶುರಾಮ ಅಂಬರೀಶ ಚಲವಾದಿ (32) ಎಂದು ಗುರುತಿಸಲಾಗಿದೆ. ಈ ಸಂಬಂಧ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!
Scroll to Top