ಮಂಗಳೂರು: ಆರ್ಥಿಕ ಸ್ಥಿತಿ ಕುರಿತು ಮನಪಾ ಶ್ವೇತ ಪತ್ರ ಹೊರಡಿಸಲಿ ➤ ವಿಪಕ್ಷ ನಾಯಕ ನವೀನ್ ಡಿಸೋಜ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 31. ಆರ್ಥಿಕ ಸ್ಥಿತಿಗತಿ ಕುರಿತಂತೆ ಮಂಗಳೂರು ಮಹಾನಗರ ಪಾಲಿಕೆಯು ಶ್ವೇತಪತ್ರ ಹೊರಡಿಸಬೇಕು ಎಂದು ವಿಪಕ್ಷ ನಾಯಕ ನವೀನ್ ಡಿಸೋಜ ಒತ್ತಾಯಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಸಭೆಯಲ್ಲಿ 30 ಕೋಟಿ ರೂ. ಗಳ ಬಗ್ಗೆ ಕೆಯುಐಡಿಎಫ್ ಸಿ ಸಾಲಕ್ಕೆ ಮೇಯರ್ ಪೂರ್ವ ಮಂಜೂರಾತಿ ನೀಡಿದ್ದು, ಇದಕ್ಕೆ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಸಣ್ಣ ಪುಟ್ಟ ಕಾಮಗಾರಿಗಳಿಗೆ ಕೆಯುಡಿಎಫ್ ಸಿ ಸಾಲ ಪಡೆಯುವ ದುರ್ಗತಿ ಮಹಾನಗರ ಪಾಲಿಕೆಗೆ ಬಂದಿಲ್ಲ ಎಂದು ಹೇಳಿದರು. ಮುಂಬರುವ ಚುನಾನಣೆಯ ಸಂದರ್ಭದಲ್ಲಿ ಈ ವಿಷಯವನ್ನು ಜನತೆಯ ಮುಂದಿಡಲಾಗುವುದು. ಇದಕ್ಕಾಗಿ ಹೋರಾಟ ಮಾಡುವ ಕುರಿತಾಗಿ ಮುಂದಿನ ದಿನಗಳಲ್ಲಿ ಪಕ್ಷದ ನಾಯಕರ ಜತೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಅನಿಲ್ ಕುಮಾರ್, ಅಬ್ದುಲ್ ರವೂಫ್, ಕೇಶವ ಮರೋಳಿ ಮೊದಲಾದವರು ಉಪಸ್ಥಿತರಿದ್ದರು.

Also Read  Mostbet Online Casino, Mostbet, Mosbet, Mostbet Bd, Mostbet Online Casino In Bangladesh Mostbet Online Betting, Mostbet Bookmaker Line, Mostbet Bookmaker Bonuses, 34

 

error: Content is protected !!
Scroll to Top