ಮೀನುಗಾರಿಕಾ ಬೋಟ್ ಢಿಕ್ಕಿ ➤ ಅಪಾರ ನಷ್ಟ



(ನ್ಯೂಸ್  ಕಡಬ) newskadaba.com ಮಲ್ಪೆ, ಡಿ. 31.  ಚಲಿಸುತ್ತಿದ್ದ ಬೋಟಿಗೆ ಮತ್ತೊಂದು ಬೋಟ್ ಢಿಕ್ಕಿ ಹೊಡೆದು ಹಾನಿಗೊಂಡ ಘಟನೆ ಮಲ್ಪೆಯಲ್ಲಿ ವರದಿಯಾಗಿದೆ.





ಗುರುದಾಸ್ ಸಾಲ್ಯಾನ್ ಅವರಿಗೆ ಸೇರಿದ ಸ್ವರ್ಣದೀಪ ಬೋಟ್ ಹಾನಿಯಾಗಿದೆ. ಮೀನುಗಾರಿಕೆಗೆ ತೆರಳುವಾಗ  ಘಟನೆ ನಡೆದಿದೆ ಎನ್ನಲಾಗಿದೆ.ಮಲ್ಪೆ ಬಂದರಿನ ಸಮೀಪ ನೇರದಲ್ಲಿ ಮತ್ತೊಂದು ಬೋಟ್ ಢಿಕ್ಕಿ ಹೊಡೆದಿದೆ. ಕತ್ತಲಾದ್ದರಿಂದ ಕಾರ್ಮಿಕರಿಗೆ ಢಿಕ್ಕಿ ಹೊಡೆದ ಬೋಟನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಬೋಟನ್ನು ನಿಧಾನವಾಗಿ ಬಂದರಿನೊಳಗೆ ತರಲಾಯಿತು. ಸುಮಾರು 40 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.






error: Content is protected !!
Scroll to Top