ಗುಡಿಸಲಿಗೆ ಬೆಂಕಿ ➤ ಓರ್ವ ಸಜೀವ ದಹನ

(ನ್ಯೂಸ್ ಕಡಬ) newskadaba.com ಬೀದರ್, ಡಿ. 31. ಪಾರ್ಟಿ ಮಾಡಿದ ನಂತರ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಓರ್ವ ವ್ಯಕ್ತಿ ಸಜೀವ ದಹನಗೊಂಡ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಹರನಾಳ ಗ್ರಾಮದಲ್ಲಿ ವರದಿಯಾಗಿದೆ.

ಮೃತಪಟ್ಟವರನ್ನು ಜಗನಾಥ ಹಲಗೆ (60) ಎಂದು ಗುರುತಿಸಲಾಗಿದೆ. ಮೃತ ಜಗನಾಥ ಹಲಗೆ ಹಾಗೂ ಮಾರುತಿ ಗೊರನೆ ಎಂಬಿಬ್ಬರು ಪಾರ್ಟಿ ಮಾಡಿ ನಿದ್ದೆಗೆ ಜಾರಿದ್ದು, ಈ ವೇಳೆ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಘಟನೆಯಲ್ಲಿ ಜಗನಾಥ ಹಲಗೆಯನ್ನು ರಕ್ಷಿಸಲು ಮುಂದಾಗಿದ್ದ ಮಾರುತಿ ಎಂಬಾತನಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಭಾಲ್ಕಿ ತಾಲೂಕಿನ ಗ್ರಾಮಿಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  'ಸರ್ಕಾರ ಗ್ಯಾರಂಟಿ ಯೋಜನೆಗಾಗಿ ವಿಕಲಚೇತನರಿಗೆ ನೀಡಿದ್ದ ಅನುದಾನ ಕಡಿತ'- ಸಚಿವ ಪ್ರಹ್ಲಾದ್‌ ಜೋಶಿ ಆಕ್ರೋಶ

 

error: Content is protected !!
Scroll to Top