ಸುಬ್ರಹ್ಮಣ್ಯದ ಅಜಿತೇಶ್ ಭೂಸೇನೆಯ ಲೆಫ್ಟಿನೆಂಟ್ ಆಗಿ ಆಯ್ಕೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ. 31. ಸುಬ್ರಹ್ಮಣ್ಯದ ಅಜಿತೇಶ್ ಪಿ.ಎಸ್. ಭೂಸೇನೆಯ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಅಜಿತೇಶ್ ಇವರು, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ, ಪಿ.ಯು ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ, ಮಡಿಕೇರಿಯ ಪೊನ್ನಂಪೇಟೆ ಕಾಲೇಜಿನಲ್ಲಿ ಫಾರೆಸ್ಟರಿಯಲ್ಲಿ ಬಿ.ಎಸ್ ಸಿ ಪದವಿಯನ್ನು ಪಡೆದಿದ್ದಾರೆ. ಯು.ಪಿ.ಎಸ್.ಸಿ. ನಡೆಸಿದ ಕಂಬೈನ್ ಡಿಫೆನ್ಸ್ ಸರ್ವಿಸ್ ಪರೀಕ್ಷೆ ಹಾಗೂ ಅಲಹಾಬಾದ್ ಸರ್ವಿಸ್ ಸೆಲೆಕ್ಷನ್ ಬೋರ್ಡ್ ನಡೆಸಿದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಈ ಹುದ್ದೆಗೆ ಆಯ್ಕೆಯಾದ ಇವರು, ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ವಿದ್ಯಾರತ್ನ ಹಾಗೂ ಬಿಳಿನೆಲೆ ಶ್ರೀ ಗೋಪಾಲಕಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಶ್ರೀ ಕೃಷ್ಣ ಶರ್ಮ.ಪಿ ದಂಪತಿಯ ಪುತ್ರ.

Also Read  ಗಡಿಯಾರ: ಲಾರಿ - ದ್ವಿಚಕ್ರ ವಾಹನದ ನಡುವೆ ಢಿಕ್ಕಿ ➤ ಸವಾರ ಮೃತ್ಯು

error: Content is protected !!
Scroll to Top