ಉಳ್ಳಾಲ: ಜ್ವರದಿಂದ ಬಳಲುತ್ತಿದ್ದ ಬಾಲಕ ಮೃತ್ಯು..!

(ನ್ಯೂಸ್  ಕಡಬ) newskadaba.com ಉಳ್ಳಾಲ, ಡಿ. 30. ತಲೆನೋವು ಹಾಗೂ ಜ್ವರದಿಂದ ಬಳಲುತ್ತಿದ್ದ ಬಾಲಕನೋರ್ವ ಮೃತಪಟ್ಟ ಘಟನೆ ಉಳ್ಳಾಲದಲ್ಲಿ ವರದಿಯಾಗಿದೆ.

ಮೃತ ಬಾಲಕನನ್ನು ಆಶ್ವಿತ್ ಎಂದು ಗುರುತಿಸಲಾಗಿದೆ. ಉಚ್ಚಿಲ ಬೋವಿ ಆಂಗ್ಲ ಮಾಧ್ಯಮದಲ್ಲಿ ಆರನೇ ತರಗತಿ ಓದುತ್ತಿದ್ದ ಬಾಲಕ ಮೆದುಳು ಜ್ವರದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮೃತ ಬಾಲಕನ ತಂದೆ ಎರಡು ವರ್ಷಗಳ ಹಿಂದೆ ಅವಘಡವೊಂದರಲ್ಲಿ ಮೃತಪಟ್ಟಿದ್ದರು. ಆಶ್ವಿನ್ ಶಾಲೆಯಲ್ಲೂ ಪ್ರತಿಭಾನ್ವಿತನಾಗಿದ್ದು ಶಿಕ್ಷಕರ ಪ್ರೀತಿಗೆ ಪಾತ್ರನಾಗಿದ್ದ ಎಂದು ತಿಳಿದು ಬಂದಿದೆ.

Also Read  ದಲಿತ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹಿನ್ನಲೆ ➤ ದಲಿತ ಸಂಘಟನೆಯಿಂದ ಹೊಸ ಹೆಜ್ಜೆ

 

error: Content is protected !!
Scroll to Top