ಪ್ರಧಾನಿ ಮೋದಿ ತಾಯಿ ಹೀರಾಬೆನ್ ವಿಧಿವಶ ➤ ಸಿಎಂ ಬೊಮ್ಮಾಯಿ ಸಂತಾಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 30. ವಯೋಸಹಜ ಖಾಯಿಲೆದಿಂದ ಶತಾಯುಷಿಯಾಗಿ ಬದುಕಿ ಇಂದು ಇಹಲೋಕ ತ್ಯಜಿಸಿದ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

 

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಮತ್ತು ಹೀರಾಬೆನ್ ಅವರ ತಾಯಿ-ಮಗನ ಸಂಬಂಧ ವಿಶಿಷ್ಟವಾಗಿತ್ತು. ಅದನ್ನು ಹಲವು ಬಾರಿ ಅವರು ತೋರಿಸಿಕೊಂಡಿದ್ದರು. ಒಬ್ಬ ತಾಯಿಯಾಗಿ ಮಗನಲ್ಲಿ ತುಂಬಬೇಕಾದ ದೇಶಭಕ್ತಿ, ಆದರ್ಶ ಗುಣಗಳು, ಕರ್ಮಯೋಗ ಗುಣಗಳನ್ನು ಪ್ರಧಾನಿ ಮೋದಿಯವರಲ್ಲಿ ತುಂಬಿ ಬಿಟ್ಟುಹೋಗಿದ್ದಾರೆ ಎಂದು ತಿಳಿಸಿದರು.

Also Read  ನಟ ದರ್ಶನ್‌ಗೆ ಎದುರಾದ ಮತ್ತೊಂದು ಸಂಕಷ್ಟ: ಹಳೆ ಪ್ರಕರಣಕ್ಕೆ ಮರು ಜೀವ

 

error: Content is protected !!
Scroll to Top