ಕಂಠಪೂರ್ತಿ ಕುಡಿದು ಶಾಲೆಯ ಜಗಲಿಯಲ್ಲಿ ಮಲಗಿದ ಕುಡುಕ ಅಧ್ಯಾಪಕ ➤ ಅಮಾನತಿಗೆ ಆಗ್ರಹ

(ನ್ಯೂಸ್ ಕಡಬ) newskadaba.com ಪೆರ್ಡೂರು, ಡಿ. 28. ಕಂಠಪೂರ್ತಿ ಕುಡಿದ ಅಧ್ಯಾಪಕನೋರ್ವ ಶಾಲೆಯ ಜಗಲಿಯಲ್ಲಿ ಮಲಗಿರುವ ಘಟನೆ ಪೆರ್ಡೂರು ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಕಂಠಪೂರ್ತಿ ಕುಡಿದು ಜಗಲಿಯಲ್ಲಿ ಮಲಗಿದ ಶಿಕ್ಷಕ ಕೃಷ್ಣಮೂರ್ತಿ ಎಂದು ತಿಳಿದು ಬಂದಿದೆ. ಕೃಷ್ಣಮೂರ್ತಿ, ಕಂಠಪೂರ್ತಿ ಮದ್ಯ ಸೇವಿಸಿ ಶಾಲೆಯ ಜಗಲಿಯಲ್ಲಿ ಮಲಗಿದ್ದರೆ, ಪುಟ್ಟ ಪುಟ್ಟ ಮಕ್ಕಳು ಶಾಲೆಯ ಒಳಗೆ ಓದು ಬರಹದಲ್ಲಿ ತೊಡಗಿದ್ದರು. ಸ್ಥಳಕ್ಕೆ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಭೇಟಿ ನೀಡಿದ್ದು, ಅಧ್ಯಾಪಕನ ವಿರುದ್ಧ ಸೂಕ್ತ ಕ್ರಮ ವಹಿಸುವ ಜೊತೆ ಕುಡುಕ ಅಧ್ಯಾಪಕನನ್ನು ಅಮಾನತು ಮಾಡಬೇಕೆಂದು ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

Also Read  ಸಿಬಿಎಸ್ಸಿ ಪರೀಕ್ಷೆ: ಕಡಬದ ಹಾಜಿರಾ ನಸೀರ್ 100% ದಲ್ಲಿ ಉತ್ತೀರ್ಣ

 

error: Content is protected !!
Scroll to Top