ಸರಕು ಸಾಗಾಟದ ಲಾರಿಗೆ ಬೆಂಕಿ ➤ ಚಾಲಕ ಪಾರು

(ನ್ಯೂಸ್ ಕಡಬ) newskadaba.com ಭಟ್ಕಳ, ಡಿ. 28. ಲಾರಿಯೊಂದಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಭಟ್ಕಳ ನಗರದ ರಂಗೀಕಟ್ಟೆಯ ಕಾಮಾಕ್ಷಿ ಅಟೋ ಸರ್ವಿಸ್ ಪೆಟ್ರೋಲ್ ಬಂಕ್ ನ ಬಳಿ ವರದಿಯಾಗಿದೆ.

ಹುಬ್ಬಳ್ಳಿಯಿಂದ ಕೇರಳದ ಕಾಸರಗೋಡಿಗೆ ಸಿಮೆಂಟ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯ ಚಾಲಕ ಲಾರಿಯನ್ನು ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ ಪೆಟ್ರೋಬ್ ಬಂಕಿಗೆ ಡಿಸ್ಟಿಲ್ಡ್ ವಾಟರ್ ತರಲು ಹೋಗಿದ್ದಾಗ ಲಾರಿಯ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಪೆಟ್ರೋಲ್ ಬಂಕ್‌ನಲ್ಲಿದ್ದ ಅಗ್ನಿ ಉಪಶಮನ ಎಕ್ಸಿಂಗ್ವಿಸ್ಟ್ರ್ ಉಪಯೋಗಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಲಾಯಿತು. ಈ ಅವಘಡದಿಂದ ಲಾರಿಯ ಮುಂಭಾಗ ಸಂಪೂರ್ಣ ಸುಟ್ಟು ಹೋಗಿತ್ತು.

Also Read  ಕಾಸರಗೋಡು ಜಿಲ್ಲೆಯಾದ್ಯಂತ ಕನ್ನಡದಲ್ಲಿ ರೇಷನ್ ಕಾರ್ಡ್ ಮುದ್ರಿಸಲು ಒತ್ತಾಯ..!

\

 

error: Content is protected !!
Scroll to Top