ಕೆ.ಆರ್.ಸಾಗರ : ಬೋನಿಗೆ ಬಿದ್ದ ಚಿರತೆ

(ನ್ಯೂಸ್ ಕಡಬ) newskadaba.com  ಕೆ.ಆರ್.ಸಾಗರ, ಡಿ. 27 . ಚಿರತೆಯೊಂದು ಬೋನಿಗೆ ಬಿದ್ದ ಘಟನೆ ಕೃಷ್ಣರಾಜಸಾಗರದ ಅಣೆಕಟ್ಟೆಯ ಬಳಿ ವರದಿಯಾಗಿದೆ.

ಹಲವು ದಿನಗಳಿಂದ  ಕೆ.ಆರ್.ಸಾಗರದ ಬಳಿ ಚಿರತೆಯೊಂದು ಕಾಣಿಸಿಕೊಂಡು ಜನರ ಆತಂಕಕ್ಕೆ ಕಾರಣವಾಗಿದೆ. ಕಾವೇರಿ ನೀರಾವರಿ ನಿಗಮದ ಕೆಲಸಗಾರರು ಅಣೆಕಟ್ಟೆ ಬಳಿ ಗಿಡ-ಗಂಟಿ ತೆರವು ಮಾಡುತ್ತಿದ್ದಾಗ ದಕ್ಷಿಣ ದ್ವಾರದ ಬಳಿಯ ನಗುವನ ತೋಟದಿಂದ  ಅಣೆಕಟ್ಟೆ ಮೇಲೆ ಚಿರತೆ ಹೋಗುತ್ತಿರುವುದನ್ನು ಕಂಡು ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಹಾಗೂ ಚಿರತೆ ಓಡಾಡುತ್ತಿರುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಚಿರತೆಯ ಹೆಜ್ಜೆ ಗುರುತುಗಳನ್ನು ಆಧಾರವಾಗಿಟ್ಟುಕೊಂಡು ಚಿರತೆ ಹಿಡಿಯುವಲ್ಲಿ ಯಶಸ್ಸಿಯಾಗಿದ್ದಾರೆ ಎನ್ನಲಾಗಿದೆ.

Also Read  ಕಾರು-ಟ್ಯಾಂಕರ್ ಢಿಕ್ಕಿ: ನಾಲ್ವರು ಗಂಭೀರ

error: Content is protected !!
Scroll to Top