ಚಿಕ್ಕಮಂಗಳೂರು : ಕಚ್ಚಿದ ಹಾವನ್ನು ಜೀವಂತವಾಗಿ ಆಸ್ಪತ್ರೆಗೆ ಹಿಡಿದುಕೊಂಡು ಬಂದ ಭೂಪ..!

(ನ್ಯೂಸ್ ಕಡಬ) newskadaba.com ಚಿಕ್ಕಮಂಗಳೂರು, ಡಿ 28:  ತನಗೆ ಕಚ್ಚಿದ ಹಾವನ್ನು ಜೀವಂತವಾಗಿ ಆಸ್ಪತ್ರೆಗೆ ಹಿಡಿದುಕೊಂಡು ಬಂದ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ವರದಿಯಾಗಿದೆ.

ಕೊಲ್ಕತ್ತಾ ಮೂಲದ ಆಸೀಪ್ ಹಾವಿನ ಸಮೇತ ಆಸ್ಪತ್ರೆ ಬಂದ ವ್ಯಕ್ತಿ. ತರೀಕೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕೆಲಸಕ್ಕೆಂದು ಬಂದಿದ್ದ ಆಸೀಪ್, ಊರಿಗೆ ಹೋಗಲು ರೈಲ್ವೆ ನಿಲ್ದಾಣದ ಬಳಿ ತೆರಳಿದ್ದ.  ವೇಳೆ ಆಸೀಪ್ ಗೆ ಈ ಹಾವು ಕಚ್ಚಿದೆ ಎನ್ನಲಾಗಿದೆ. ಹಾಗಾಗಿ ಚಿಕಿತ್ಸೆ ಪಡೆಯಲು ಅನುಕೂಲವಾಗಲೆಂದು ಹಾಗೂ ತನಗೆ ಕಚ್ಚಿದ ಹಾವು ಯಾವುದೆಂದು ವೈದ್ಯರಿಗೆ  ಗೊತ್ತಾಗಲೆಂದು ಆ ಹಾವನ್ನು ಜೀವಂತವಾಗಿ ಕೈಯಲ್ಲಿ ಹಿಡಿದುಕೊಂಡು ನೇರವಾಗಿ ಆಸ್ಪತ್ರೆಗೆ ತೆರಳಿವುದಾಗಿ ತಿಳಿದು ಬಂದಿದೆ.

Also Read  ರಾಜ್ಯದೆಲ್ಲೆಡೆ ಚುನಾವಣಾ ಕಟ್ಟೆಚ್ಚರ ➤ 1 ಲಕ್ಷದ 56 ಸಾವಿರ ಪೊಲೀಸರ ನಿಯೋಜನೆ

error: Content is protected !!
Scroll to Top