ಬಳ್ಳಾರಿ : ಕಾಲುವೆಗೆ ಬಿದ್ದು 90 ಕುರಿಗಳು ಮೃತ್ಯು..!

(ನ್ಯೂಸ್ ಕಡಬ) newskadaba.com ಬಳ್ಳಾರಿ ,  ಡಿ 27 :   ಕಾಲುವೆ ದಾಟುವಾಗ ಒಂದರ ಮೇಲೊಂದು ಬಿದ್ದು  90 ಕುರಿಗಳು ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನೆಹರೂ ನಗರದ ಬಳಿ ಸಂಭವಿಸಿದೆ.

ಮೇವು ಹರಸಿಕೊಂಡು ಸಿರುಗುಪ್ಪ ತಾಲೂಕಿಗೆ  ಕಾಲುವೆ ಮೂಲಕ ಹೋಗುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಕುರಿಗಾಹಿ ಸಿದ್ದಪ್ಪ ಎಂಬುವವರ 19 ಕುರಿಗಳು, ಮಂಜುನಾಥ್ 26, ಮಂಜುನಾಥ್ ಸತ್ಯಪ್ಪ ಎಂಬುವವರ 53 ಕುರಿಗಳು ಮೃತಪಟ್ಟಿವೆ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ನಿರ್ದೇಶಕ ಡಾ.ಗಂಗಾಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!

Join the Group

Join WhatsApp Group