(ನ್ಯೂಸ್ ಕಡಬ) newskadaba.com ಬೆಂಗಳೂರು , ಡಿ 27 : ಅತಿವೇಗವಾಗಿ ಹೋಗುತ್ತಿದ್ದ ಬೈಕೊಂದು ಆಯತಪ್ಪಿ ಬಿದ್ದ ಪರಿಣಾಮ ಪೋರ್ಟರ್ ಕಂಪನಿಯ ಪ್ರತಿನಿಧಿಯೊಬ್ಬರು ಮೃತಪಟ್ಟ ದಾರುಣ ಘಟನೆ ಹೆಚ್ ಎಸ್ ಆರ್ ಲೇಔಟ್ ನ ಹೊರವರ್ತುಲ ರಸ್ತೆಯ ಇಬ್ಬಲೂರು ಬ್ರಿಡ್ಜ್ ಡೌನ್ ನಲ್ಲಿ ವರದಿಯಾಗಿದೆ.
ಮೃತರನ್ನು ಪೈಲೇಔಟ್ ನ ಸಂತೋಷ್ ಹೊಂಗಲ್ (33) ಎಂದು ಗುರುತಿಸಲಾಗಿದೆ.
ಹೆಚ್ ಎಸ್ ಆರ್ ಲೇಔಟ್ ನ ಹೊರವರ್ತುಲ ರಸ್ತೆಯ ಇಬ್ಬಲೂರು ಬ್ರಿಡ್ಜ್ ಡೌನ್ ಬಳಿ ಕೆಲಸ ಮುಗಿಸಿಕೊಂಡು ಇವರು ಅತಿವೇಗವಾಗಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಆಯತಪ್ಪಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅತಿವೇಗ ಮತ್ತು ಅಜಾಗರೂಕ ಚಾಲನೆಯೇ ಈ ಅಪಘಾತಕ್ಕೆ ಕಾರಣವೆಂದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆ ನಡೆದ ಸ್ಥಳಕ್ಕೆ ಹೆಚ್ ಎಸ್ ಆರ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎನ್ನಲಾಗಿದೆ.