8 ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ ➤ ಬಿಡಿಸಲು ಬಂದ ತಂದೆಗೂ ಕಚ್ಚಿದ ನಾಯಿ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 27. ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಂದೆಯ ಮೇಲೆ ಬೀದಿ ನಾಯಿ ದಾಳಿ ಮಾಡಿರುವ ಘಟನೆ ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯ ಲಕ್ಷ್ಮೀದೇವಿ ನಗರದಲ್ಲಿ ವರದಿಯಾಗಿದೆ.

ಗಾಯಾಳುಗಳನ್ನು ಬಾಲಕಿ ನೂರಿನ್ ಫಲಕ್ ಮತ್ತು ಈಕೆ ತಂದೆ ಫಕ್ರುದ್ದೀನ್‌ ಎಂದು ಗುರುತಿಸಲಾಗಿದೆ. ಬಿಬಿಎಂಪಿಯ ಆರಂಭಿಕ ವರದಿಗಳ ಪ್ರಕಾರ, ನೂರಿನ್ ಫಲಕ್ ಎಂಬ ಬಾಲಕಿಯು ತನ್ನ ತಂದೆಯ ಜೊತೆ ಹೊರಗೆ ಹೋಗುತ್ತಿದ್ದಾಗ ನಾಯಿಯು ಆಕೆಯನ್ನು ಹಿಂಬಾಲಿಸಿ ದಾಳಿ ಮಾಡಿದ್ದು, ಇದನ್ನು ತಪ್ಪಿಸಲು ಆಕೆಯ ತಂದೆ ಮುಂದಾದಾಗ, ಅವರಿಗೂ ನಾಯಿ ಕಚ್ಚಿದೆ ಎನ್ನಲಾಗಿದೆ. ಘಟನೆಯ ಕುರಿತು ಬಿಬಿಎಂಪಿ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಶಿಂಧೆ ಮಾತನಾಡಿ, ‘ಮಗುವಿಗೆ ಗಾಯಗಳಾಗಿದ್ದು, ಆಕೆಯ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಹೊಲಿಗೆ ಹಾಕಲಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ. ನಾವು ಚಿಕಿತ್ಸೆಯ ವೆಚ್ಚವನ್ನು ಮರುಪಾವತಿಸುತ್ತೇವೆ ಮತ್ತು ಪರಿಹಾರವಾಗಿ 10,000 ರೂ. ನೀಡುತ್ತೇವೆ’ ಎಂದಿದ್ದಾರೆ.

Also Read  ರಾಜ್ಯದಲ್ಲಿಂದು 101 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 2283ಕ್ಕೆ ಏರಿಕೆ

 

error: Content is protected !!
Scroll to Top