ಆನೇಕಲ್: ಪೋಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ

(ನ್ಯೂಸ್ ಕಡಬ) newskadaba.com ಬೆಂಗಳೂರು , ಡಿ 23 : ಗಾಂಜಾ ಮತ್ತಿನಲ್ಲಿದ್ದ ಗ್ಯಾಂಗ್​ ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್- ಅತ್ತಿಬೆಲೆ ಮುಖ್ಯರಸ್ತೆಯ ದಿನ್ನೂರಿನ ನೀಲಗಿರಿ ತೋಪಿನಲ್ಲಿ ಸಂಭವಿಸಿದೆ.

ಗಾಯಾಳುವನ್ನು ಪೊಲೀಸ್ ಸಿಬ್ಬಂದಿ ರಂಗನಾಥ್ ಎಂದು ಗುರುತಿಸಲಾಗಿದೆ. ಗಾಂಜಾ ಮತ್ತಿನಲ್ಲಿದ್ದ ವರುಣ್ ಅಲಿಯಾಸ್ ಕೆಂಚ ಮತ್ತು ಈತನ ಗ್ಯಾಂಗ್, ರಾಘವೇಂದ್ರ ನಡು ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದಕ್ಕೆ ಗ್ಯಾಂಗ್​ಗೆ ಪೋಲೀಸ್ ಸಿಬ್ಬಂದಿ ರಂಗನಾಥ್ ಎಂಬವರು ಬುದ್ಧಿವಾದ ಹೇಳಿದ್ದಾರೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಗ್ಯಾಂಗ್, ರಂಗನಾಥ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.

Also Read  ಮೊಬೈಲ್ ಚಾರ್ಜಿಂಗ್ ಪ್ಲಗ್ ತೆಗೆಯುವಾಗ ವಿದ್ಯುತ್ ಶಾಕ್ ► ಯುವಕ ಸ್ಥಳದಲ್ಲೇ ಮೃತ್ಯು

ಗಾಂಜಾ ಗ್ಯಾಂಗ್​ ಸದಸ್ಯರು ಈಗಾಗಲೇ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಗಾಂಜಾ ಮಾರಾಟ, ದರೋಡೆ, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ವರುಣ ಅಲಿಯಾಸ್ ಕೆಂಚನ ವಿರುದ್ಧ ಹತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ.

error: Content is protected !!
Scroll to Top