ಟೊಮೆಟೊ, ಈರುಳ್ಳಿ ಸ್ಥಿರ ; ಬೀನ್ಸ್ ಏರಿಕೆ

(ನ್ಯೂಸ್ ಕಡಬ) newskadaba.com  ಉಡುಪಿ , ಡಿ 23 :  ಮಾರುಕಟ್ಟೆಯಲ್ಲಿ ಈ ವಾರ ಟೊಮೆಟೊ ಹಾಗೂ ಈರುಳ್ಳಿ ದರ ಸ್ಥಿರತೆ ಕಾಯ್ದಕೊಂಡಿದೆ. ಕಳೆದ ವಾರ ಟೊಮೆಟೊ ಕೆ.ಜಿಗೆ ರೂ.30 ದರ ಇತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರಸ್ತುತ ರೂ.25 ರಿಂದ ರೂ.30ಕ್ಕೆ ಮಾರಾಟವಾಗುತ್ತಿವೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ 20 ಇದೆ. ಕಳೆದವಾರ ಕೆ.ಜಿಗೆ 40 ಬೆಲೆ ಇದ್ದ ಈರುಳ್ಳಿ ಕೂಡ 30 ರಿಂದ 40 ಕ್ಕೆ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ.

ಬೀನ್ಸ್ ದರ ಗಗನಮುಖಿ :

2 ತಿಂಗಳ ಹಿಂದೆ ಶತಕದ ಗಡಿ ದಾಟಿ ದಿಢೀರ್ ಕುಸಿದ ಕಂಡಿದ್ದ ಬೀನ್ಸ್ ದರ ಮತ್ತೆ ಏರಿಕೆಯಾಗಿದೆ. ಕಳೆದ ವಾರ ಕೆ.ಜಿ ರೂ.40 ಇದ್ದ ಬೀನ್ಸ್ ರೇಟ್ ಸದ್ಯ ರೂ.60 ಕ್ಕೆ ಮುಟ್ಟಿದೆ. ಬೆಲೆ ಮತ್ತಷ್ಟು ಹೆಚ್ಚಾಗುವ ಸಾದ್ಯತೆಗಳಿವೆ ಎನ್ನುತ್ತಾರೆ ವ್ಯಾಪರಿಗಳು. ಕ್ಯಾರೆಟ್ ಸ್ವಲ್ಪ ಅಗ್ಗವಾಗಿದೆ. ಕಳೆದ ವಾರ ರೂ. 50 ಕ್ಕೆ ಸಿಗುತ್ತಿದ್ದ ಕ್ಯಾರೆಟ್ ಸದ್ಯ ರೂ. 40 ಕ್ಕೆ ಲಭ್ಯವಾಗುತ್ತಿದೆ.

Also Read  ವೃದ್ಧೆಯ ಸರ ಎಗರಿಸಿ ಎಸ್ಕೇಪ್.!

ಸೊಪ್ಪು ದರದಲ್ಲಿ ಸ್ಥಿರತೆ ಇದ್ದು, ದಂಟು 15, ಕೊತ್ತಂಬರಿ 8, ಸಬ್ಬಸ್ಸಿಗೆ 8, ಮೆಂತೆ 8, ಪುದಿನ 5, ಪಾಲಕ್ 8 ದರ ಇದೆ. ಶಂಠಿ ಕೆ.ಜಿಗೆ ರೂ. 110. ಸಿಹಿ ಕುಂಬಳ 25, ಬದನೆಕಾಯಿ 40, ಮೂಲಂಗಿ 35, ಹಾಗಲಕಾಯಿ 50, ತೊಂಡೆಕಾಯಿ 60, ಹಸಿರು ಬಟಾಣಿ ಸಿಪ್ಪೆ ಸಹಿತ 70 ರಿಂದ 80, ಹೀರೆಕಾಯಿ 60, ಆಲೂಗಡ್ಡೆ 40, ಸೇರೆಕಾಯಿ 35, ಕ್ಯಾರೆಟ್ 40, ಗೆಣಸು 40, ಸಾಂಬಾರ್ ಸೌತೆ 30 ದರ ಇದೆ ಎನ್ನಲಾಗಿದೆ

error: Content is protected !!
Scroll to Top