ಮೈಸೂರು: ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ

(ನ್ಯೂಸ್ ಕಡಬ) newskadaba.com ಮೈಸೂರು, ಡಿ. 22. 3 ವರ್ಷದ ಗಂಡು ಚಿರತೆಯೊಂದು ಅರಣ್ಯಧಿಕಾರಿಗಳು ಇಟ್ಟ ಬೋನಿಗೆ ಬಿದ್ದ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮುತ್ತತ್ತಿ ಗ್ರಾಮದಲ್ಲಿ ನಡೆದಿದೆ.

ದಿಲೀಪ್ ಎಂಬವರು ತೋಟದಲ್ಲಿ ಈ ಚಿರತೆ ಸಿಕ್ಕಿಬಿದ್ದಿದೆ. ಕಳೆದ 3-4 ದಿನದ ಹಿಂದೆ ನಾಯಿ ಮೇಲೆ ದಾಳಿ ಮಾಡಿದ ಚಿರತೆ ಜನರ ಅತಂಕ ಕಾರಣವಾಗಿತ್ತು. ಅದರಿಂದ ಜನರು ಚಿರತೆಯನ್ನು ಸೆರೆಯಿಡಿಯಲು ಅರಣ್ಯಧಿಕಾರಿಗಳಿಗೆ ಒತ್ತಾಯಿಸಿದ್ದರು. ಇದೀಗ ಚಿರತೆಯ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಈಗಾಗಲೇ ಚಿರತೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

Also Read  ಕಾಡಿನಲ್ಲಿ ವಿಮಾನ ಪತನ - ಪೈಲಟ್ ಗಳಿಬ್ಬರು ಮೃತ್ಯು

error: Content is protected !!
Scroll to Top