ಕುಡುಕ ತಂದೆಯ ಹುಚ್ಚಾಟಕ್ಕೆ ಆಸ್ಪತ್ರೆ ಸೇರಿದ ಮಗ..!



(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 22. ಕುಡುಕ ತಂದೆಯ ಹುಚ್ಚಾಟಕ್ಕೆ ಮಗನೋರ್ವ ಆಸ್ಪತ್ರೆ ಸೇರಿದ ಘಟನೆ ನಗರದ ಮಹದೇವಪುರದ ರಂಗನಾಥ ಲೇಔಟ್ ನಲ್ಲಿ ಸಂಭವಿಸಿದೆ.





ಆರೋಪಿಯನ್ನು ವೆಂಕಟರಾಮ ರೆಡ್ಡಿ ಎಂದು ಗುರುತಿಸಲಾಗಿದೆ. ಆರೋಪಿಯು ಹಣಕ್ಕಾಗಿ ಪದೇ ಪದೇ ಮಗನನ್ನು ಪೀಡಿಸುತ್ತಿದ್ದು, ಮಗ ಹಣ ಕೊಡಲು ನಿರಾಕರಿದ್ದಾನೆ  ಇದರಿಂದ ಕೋಪಗೊಂಡ ತಂದೆ ಮಗನ ತಲೆಗೆ ಮಚ್ಚಿನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top