(ನ್ಯೂಸ್ ಕಡಬ) newskadaba.com ಕೊಡಗು, ಡಿ. 22. ರಾಜ್ಯದ ಪ್ರತಿಷ್ಠಿತ ಮೂರು ಸಾಕಾನೆಗಳ ಶಿಬಿರದಿಂದ 14 ಆನೆಗಳನ್ನು ಮಧ್ಯಪ್ರದೇಶಕ್ಕೆ ಕಳುಹಿಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.
ಸಾಕಾನೆಗಳ ನಿರ್ವಹಣೆ ಹಾಗೂ ಒತ್ತಡ ಕಡಿಮೆ ಮಾಡಲು ರಾಜ್ಯ ಸರಕಾರ ಹುಲಿ ಮತ್ತು ಕಾಡಾನೆಗಳ ಕಾರ್ಯಾಚರಣೆಗೆ ಬಳಸುವ ಆನೆಗಳನ್ನು ಹೊರತುಪಡಿಸಿ ಉಳಿದ 14 ಸಾಕಾನೆಗಳನ್ನು ಮಧ್ಯಪ್ರದೇಶಕ್ಕೆ ಕಳುಹಿಸಲು ಹಸಿರು ನಿಶಾನೆ ತೋರಿದೆ. ಈ ವಿಚಾರವಾಗಿ ಕರ್ನಾಟಕ ಮತ್ತು ಮಧ್ಯಪ್ರದೇಶದ ವೈಲ್ಡ್ ಲೈಫ್ ವಾರ್ಡನ್ ಜತೆ ಅಂತಿಮ ಹಂತದ ಪತ್ರ ವ್ಯವಹಾರಗಳು ನಡೆದಿದ್ದು, ಇನ್ನು 14 ಆನೆಗಳನ್ನು ತಿಂಗಳಾಂತ್ಯದಲ್ಲಿ ಸ್ಥಳಾಂತರಿಸಬೇಕಿದೆ. ವೈಲ್ಡ್ ಪಿಸಿಸಿಎಎಫ್ ಅಧಿಕಾರಿಗಳು ಆನೆಗಳನ್ನು ಕಳುಹಿಸಲು ಶಿಬಿರಗಳ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.