ಬೆಳ್ತಂಗಡಿ : ಕಸದ ತೊಟ್ಟಿಯಲ್ಲಿ ಪೊಲೀಸ್ ಟೋಪಿಗಳು ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ , ಡಿ 21 : ಪೊಲೀಸರು ಧರಿಸುವ ನಾಲ್ಕು ಟೋಪಿಗಳು ಕಸದ ತೊಟ್ಟಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆ ಸುವರ್ಣ ಆರ್ಕೇಡ್ ಬಳಿ ನಡೆದಿದೆ.

ಮೂರು ಖಾಕಿ ಟೋಪಿ ಹಾಗೂ ಒಂದು ಬಿಳಿ ಟೋಪಿ ಕಸದ ತೊಟ್ಟಿಯಲ್ಲಿ ಕಂಡು ಬಂದಿದೆ ಎನ್ನಲಾಗಿದೆ. ಪೊಲೀಸ್ ಸಮವಸ್ತ್ರ, ಬೆಲ್ಟ್, ಟೋಪಿಗೆ ಇದಕ್ಕೆಲ್ಲಾ ಅದರದ್ದೇ ಆದ ಕನೂನು ನಿಯಮಗಳಿವೆ. ಹಾಳಾದ ಟೋಪಿ ಅಥವಾ ಸಮವಸ್ತ್ರವನ್ನು ವಿಲೇವಾರಿ ಮಾಡುವಲ್ಲಿಯೂ ಅದರದ್ದೇ ಆದ ನಿಯಮವನ್ನು ಪಾಲಿಸಬೇಕು. ಈ ರೀತಿ ಮಾಡುವುದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ದೂರದ ಊರಿಗೆ ಹೋಗುವ ಪೊಲೀಸರು ಈ ರೀತಿ ಇದನ್ನು ಎಸೆದಿರಬಹುದು ಎಂದು ಶಂಕಿಸಲಾಗಿದೆ.

Also Read  ಬಿಜೆಪಿ ಕಾರ್ಯಕರ್ತರಿಂದ ಮರ್ದಾಳ, ಬಜಕೆರೆ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಚತಾ ಕಾರ್ಯಕ್ರಮ

 

error: Content is protected !!
Scroll to Top