ಉಳ್ಳಾಲ: ಗೃಹ ಪ್ರವೇಶದ ಮನೆಯಲ್ಲಿ ಕಳ್ಳನ ಕೈಚಳಕ

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 21. ಕಳ್ಳನೋರ್ವ ಗೃಹ ಪ್ರವೇಶದ ಸಂದರ್ಭದಲ್ಲಿ ಎಲ್ಲರ ಮುಂದೆ ಕಳ್ಳತನ ಮಾಡಿ ನಂತರ ಅದೇ ದಿನ ರಾತ್ರಿ ನೆರೆ ಮನೆಯಿಂದಲೂ ಲಕ್ಷಾಂತರ ಮೌಲ್ಯದ ನಗದನ್ನು ದೋಚಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಬಳಿ ನಡೆದಿದೆ.

ಈತ ಹೋಮ ನಡೆಯುತ್ತಿದ್ದ ವೇಳೆ ಮನೆಯೊಳಗೆ ನುಗ್ಗಿ ಬ್ಯಾಗಲ್ಲಿದ್ದ ರೂ 15,000 ನಗದು, ಮೊಬೈಲ್ ಜಾರ್ಜರ್ ಮತ್ತು ಬೆಲೆ ಬಾಳುವ ಕಾಸ್ಮೆಟಿಕ್ಸ್ ಕಳವು ಮಾಡಿ ಹೊರಬಂದ ದೃಶ್ಯ ಹಾಗೂ ಅದೇ ದಿನ ರಾತ್ರಿ ನೆರೆಮನೆಯ ಶಿವ ಸುಬ್ರಹ್ಮಣ್ಯ ಪ್ರಸಾದ್ ಭಟ್ ರವರ ಮನೆಯ ಬಾಗಿಲು ಒಡೆದು ಮನೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ 11,000 ರೂ. ನಗದು, 32 ಗ್ರಾಂ. ಚಿನ್ನ, 8 ಬೆಳ್ಳಿ ನಾಣ್ಯ ಮತ್ತು 3 ರೇಡೋ ವಾಚ್ ಸಹಿತ ಒಟ್ಟು 1,49,000  ರೂ, ಮೌಲ್ಯದ ನಗದನ್ನು ಕದ್ದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸುಬ್ರಹ್ಮಣ್ಯ ವಲಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ಸುಬ್ರಹ್ಮಣ್ಯ ಆಯ್ಕೆ

error: Content is protected !!
Scroll to Top